*ಮಂಗಳೂರು : ಪದ್ಮರಾಜ್ ಪೂಜಾರಿ ಸ್ವಬೂತಿನಲ್ಲಿ ಹಿನ್ನಡೆಯ ರುಚಿ ತೋರಿಸಿದ ಯುವ ಮುಖಂಡ ಪ್ರಕಾಶ್ ಪೂಜಾರಿ ಗರೋಡಿ*
ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ತನ್ನ ಬೂತಿನಲ್ಲೇ ಮತಗಳ ಹಿನ್ನಡೆಯಾಗಿಸುವಲ್ಲಿ ಪ್ರಕಾಶ್ ಪೂಜಾರಿ ಗರೋಡಿ ಯಶಸ್ವಿಯಾಗಿದ್ದರೆ.
ತೀವ್ರ ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಈ ಬಾರಿ ಕುತೂಹಲದ ಕೇಂದ್ರ ಬಿಂದುವಾಗಿತ್ತು. ಕಾರಣ ಜಾತಿ ಆಧಾರಿತ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆಲ್ಲಬಹುದಾದ ಅವಕಾಶ ಬಹಳಷ್ಟಿತ್ತು. ಯಾಕೆಂದರೆ ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವ ಸಮುದಾಯದ, ಕುದ್ರೋಳಿ ಗೋಕಾರ್ಣನಾಥ ಕ್ಷೇತ್ರದ ಪದಾಧಿಕಾರಿ ಆಗಿರುವ ಪದ್ಮರಾಜ್ ಆರ್ ಪೂಜಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು, ಅದಲ್ಲದೇ ಇವರು ಅಗ್ರಗಣ್ಯ ಮಾಜಿ ಸಂಸದ, ಹಿರಿಯ ಬಿಲ್ಲವ ಮುಖಂಡ ಬಿ. ಜನಾರ್ಧನ ಪೂಜಾರಿ ಅವರ ಪಟ್ಟ ಶಿಷ್ಯರಾಗಿದ್ದು ಅವರಂತೆ ಕಾರ್ಯನಿರ್ವಹಿಸುವ ಯೋಚನೆಯುಳ್ಳವರಾಗಿದ್ದರು. ಮಂಗಳೂರಿನ ಬಗ್ಗೆ ಬಹಳ ಕನಸ್ಸನ್ನು ಕಂಡಿದ್ದು ಗೆದ್ದ ನಂತರ ಅಭಿವೃದ್ಧಿ ಮೂಲಕ ಮಂಗಳೂರನ್ನು ಬದಲಾಯಿಸುವ ಆಶ್ವಾಸನೆ ನೀಡಿದ್ದರು.
ಸ್ವಬೂತಿನಲ್ಲಿ ಪದ್ಮರಾಜ್ ಗೆ ಹಿನ್ನಡೆ:-
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತಕ್ಕೆ ಒಳಪಟ್ಟಿರುವ ಬೂತ್ ಸಂಖ್ಯೆ 179 ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರ ಸ್ವಂತ ಬೂತ್, ಈ ಬೂತಿನಲ್ಲಿ ಬಿಲ್ಲವ ಸಮುದಾಯದ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದ್ದು ಪದ್ಮರಾಜ್ ಗೆ ಮುನ್ನಡೆ ಸಾಧಿಸುವರೆಂದು ಊಹಿಸಲಾಗಿತ್ತು.
ಲೆಕ್ಕಚಾರ ಬದಲಾಯಿಸಿದ ಪ್ರಕಾಶ್ ಗರೋಡಿ:-
ಇವರ ಲೆಕ್ಕಾಚಾರವನ್ನು ಸವಾಲಾಗಿ ಸ್ವೀಕರಿಸಿದ ಬಿಲ್ಲವ ಸಮುದಾಯದ ಯುವಕ, ಜಿಲ್ಲಾ ಬಿಜೆಪಿ ಯುವಮೋರ್ಚಾದ ಕಾರ್ಯದರ್ಶಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ಆಪ್ತ ಪ್ರಕಾಶ್ ಪೂಜಾರಿ ಗರೋಡಿ ತನ್ನ ರಾಜಕೀಯ ತಂತ್ರಗಾರಿಕೆಯಿಂದ ಬಿಲ್ಲವ ಮತವನ್ನು ಸಂಪೂರ್ಣವಾಗಿ ಬಿಜೆಪಿಯೆಡೆಗೆ ತಿರುಗಿಸಿ ಸ್ವಬೂತಿನಲ್ಲಿ ಪದ್ಮರಾಜ್ ಗೆ ಹಿನ್ನಡೆಯಾಗಲು ಕಾರಣೀಕರ್ತರಾಗಿದ್ದಾರೆ. ಬೂತ್ ಸಂಖ್ಯೆ 179 ರಲ್ಲಿ ಚಲಾಯಿತ ಮತಗಳು (733) ಅದರಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ 463 ಮತ ಪಡೆದರೆ, ಪದ್ಮರಾಜ್ ಪೂಜಾರಿ 266 ಮತಗಳನ್ನು ಪಡೆದಿದ್ದು, ಬಿಜೆಪಿಗೆ 197 ಮತಗಳ ಮುನ್ನಡೆ ಲಭಿಸಿದೆ. ಸ್ವ ಬೂತಿನಲ್ಲಿ ಪದ್ಮರಾಜ್ ಹಿನ್ನಡೆ ಅನುಭವಿಸಲು ಕಾರಣೀಕರ್ತರಾದ ಪ್ರಕಾಶ್ ಪೂಜಾರಿ ಗರೋಡಿ ಪಕ್ಷದ ಮುಖಂಡರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
0 Comments