ಮೂರನೇ ಬಾರಿಗೆ ಬಿಜೆಪಿ ಅಧಿಕಾರ: ಮೂಡುಬಿದಿರೆಯಲ್ಲಿ ಮನೆಮನೆಗೆ ಸಿಹಿ ಹಂಚಿದ ಕಾರ್ಯಕರ್ತರು

ಜಾಹೀರಾತು/Advertisment
ಜಾಹೀರಾತು/Advertisment

 ಮೂರನೇ ಬಾರಿಗೆ ಬಿಜೆಪಿ ಅಧಿಕಾರ: ಮೂಡುಬಿದಿರೆಯಲ್ಲಿ ಮನೆಮನೆಗೆ ಸಿಹಿ ಹಂಚಿದ ಕಾರ್ಯಕರ್ತರು

ಭಾರತೀಯ ಜನತಾ ಪಾರ್ಟಿಯ ನಾಯಕ ನರೇಂದ್ರ ಮೋದಿಯವರು ಮೂರನೇ ಬಾರಿ ದೇಶದ ಪ್ರಧಾನಿ ಗದ್ದುಗೆ ಏರಿದ್ದು ಹಾಗೂ ದಕ್ಷಿಣ ಕನ್ನಡ ಸೇರಿದಂತೆ ದೇಶದೆಲ್ಲೆಡೆ ಭಾರತೀಯ ಜನತಾ ಪಾರ್ಟಿ ಮತ್ತೊಮ್ಮೆ ವಿಜಯ ಪತಾಕೆ ಹಾರಿಸಿದ್ದರ ಪ್ರಯುಕ್ತ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಬೂತ್ ಸಂಖ್ಯೆ 73 ರೇಂಜ್ ಫಾರೆಸ್ಟ್ ಆಫೀಸ್ ಹಾಗೂ ಬೂತ್ ಸಂಖ್ಯೆ 74 ಮಾಸ್ತಿಕಟ್ಟೆಯಲ್ಲಿ ಮನೆಮನೆಗೆ ತೆರಳಿ ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಿದರು.

ಮೂಡುಬಿದಿರೆ ಪುರಸಭೆಯ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ನೇತೃತ್ವದಲ್ಲಿ ಬೂತ್ ಸಂಖ್ಯೆ 73ರ ಅಧ್ಯಕ್ಷರಾದ ಶ್ರೀ ಯುತ ಸುದರ್ಶನ್ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಸದಾನಂದ ಶೆಣೈ ಮತ್ತು ಬೂತ್ ಸಂಖ್ಯೆ 74ರ ಅಧ್ಯಕ್ಷರಾದ ಶ್ರೀ  ಪಾರ್ಶ್ವನಾಥ ಬಲ್ಲಾಳ್ ಹಾಗೂ ಪ್ರಧಾನ ಕಾರ್ಯದರ್ಶಿಯಾದ ರವೀಂದ್ರ ಶೆಟ್ಟಿ ಇವರಿಗೆ ಹಾಗೂ  2 ಬೂತಿನ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

Post a Comment

0 Comments