ತುಟ್ಟಿಭತ್ತೆ ನೀಡಲು ಒತ್ತಾಯಿಸಿ ಸಿಐಟಿಯುನಿಂದ ಪ್ರತಿಭಟನಾ ಪ್ರದರ್ಶನ

ಜಾಹೀರಾತು/Advertisment
ಜಾಹೀರಾತು/Advertisment

 ತುಟ್ಟಿಭತ್ತೆ ನೀಡಲು ಒತ್ತಾಯಿಸಿ ಸಿಐಟಿಯುನಿಂದ ಪ್ರತಿಭಟನಾ ಪ್ರದರ್ಶನ

*ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದು ನಮ್ಮ ಹೋರಾಟದ ಶಕ್ತಿ ಹೆಚ್ಚಾಗಬೇಕಿದೆ

ಮೂಡುಬಿದಿರೆ: ರಾಜ್ಯ ಸರಕಾರವು ನಮಗೆ ಎರಡು ಸಾವಿರ ನೀಡಿರುವ ಬಗ್ಗೆ, ಉಚಿತ ಬಸ್‌ ಪ್ರಯಾಣ ಸಹಿತ ಇತರ ಬಿಟ್ಟಿ ಭಾಗ್ಯಗಳನ್ನು ನೀಡಿರುವ ಬಗ್ಗೆ ನಾವು ಎಂಪಿ ಚುನಾವಣೆಯಲ್ಲಿ ಮರೆತಿದ್ದೇವೆ ಬಿಡಿ ಆದರೆ ಇದೀಗ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದೆ ಆದ್ದರಿಂದ ನಮ್ಮ ಹೋರಾಟದ ಶಕ್ತಿ ಇನ್ನಷ್ಟು ಜಾಸ್ತಿಯಾಗಬೇಕಿದೆ ಎಂದು ಸಿಐಟಿಯುನ ಜಿಲ್ಲಾ ಅಧ್ಯಕ್ಷ ವಸಂತ ಆಚಾರಿ ಹೇಳಿದರು.

   ಬೀಡಿ ಕಾರ್ಮಿಕರಿಗೆ ಏರಿಳಿತ ತುಟ್ಟಿಭತ್ತೆ ನೀಡಲು ಒತ್ತಾಯಿಸಿ ಸಿಐಟಿಯು  ಶುಕ್ರವಾರ ಮೂಡುಬಿದಿರೆ ಸೌತ್ ಕೆನರಾ ಹೋಂ ಇಂಡಸ್ಟ್ರೀಸ್ ಮೂಡುಬಿದಿರೆ ಡಿಪೋ ಮುಂದೆ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.

ಬೀಡಿ ಕಾರ್ಮಿಕರಿಗೆ ಮಂಜೂರಾಗಿರುವ ತುಟ್ಟಿಭತ್ತೆಯನ್ನು ನೀಡಲು ಹಿಂದೇಟು ಹಾಕುತ್ತಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು ಬೀಡಿ ಕಾರ್ಮಿಕರಿಗೆ ಗರ್ವ ಬಂದರೆ ಬೀಡಿ ಮಾಲಕರನ್ನು ಮಣಿಸಲೂ ಸಾಧ್ಯ ಎಂದು ಎಚ್ಚರಿಸಿದರು.

  ಬೀಡಿ ಫೆಡರೇಶನ್ ನ ರಾಜ್ಯಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಅವರು ಪ್ರತಿಭಟನಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ ಈ ವರ್ಷದಿಂದ ಏರಿಕೆಯಾಗಿರುವ ತುಟ್ಟಿಭತ್ತೆಯನ್ನು ಬೀಡಿ ಮಾಲಕರು ಕಾರ್ಮಿಕರಿಗೆ ನೀಡದೆ ಸತಾಯಿಸುತಿದ್ದಾರೆ ಈ ಬಗ್ಗೆ ಕಳೆದ ಒಂದು ತಿಂಗಳ ಹಿಂದೆಯೇ ಬೀಡಿ ಮಾಲಕರಿಗೆ, ರಾಜ್ಯ ಸರಕಾರಕ್ಕೆ ಮತ್ತು ಜಿಲ್ಲೆಯ ಕಾರ್ಮಿಕರಿಗೆ ಮನವಿಯನ್ನು ನೀಡಿದ್ದೇವೆ ಆದರೆ ಯಾರೂ ಕೂಡಾ ನಮ್ಮ ಜತೆ ಮಾತುಕತೆ ನಡೆಸಿಲ್ಲ.

  ಬೆಲೆ ಏರಿಕೆ ಜಾಸ್ತಿಯಾಗುತ್ತಿರುವುದರಿಂದ ಜನರಿಗೆ ಜೀವನ ನಡೆಸಲು ಕಷ್ಟ ಸಾಧ್ಯವಾಗಿದೆ ಈ ಕೂಡಲೇ ಸರಕಾರ ಮಧ್ಯ ಪ್ರವೇಶ ಮಾಡಿ ಏರಿಕೆಯಾಗಿರುವ ತುಟ್ಟಿಭತ್ತೆಯನ್ನು  ಬೀಡಿ ಮಾಲಕರು ನೀಡುವಂತೆ ಮಾಡಬೇಕೆಂದು ಆಗ್ರಹಿಸಿದರು.

  ಸಿಐಟಿಯುನ ಮುಖಂಡರಾದ ಯಾದವಶೆಟ್ಟಿ, ರಮಣಿ, ಸೀತಾರಾಮ ಬೆರಿಂಜ, ಸುರೇಶ್ ಕುಮಾರ್, ರಾಧ, ಗಿರಿಜಾ, ಲಕ್ಷ್ಮೀ ಮತ್ತಿತರರು ಈ ಸಂದರ್ಭದಲ್ಲಿದ್ದರು.

Post a Comment

0 Comments