ಈಜುಕೊಳದಲ್ಲಿ ಡೈ ಹೊಡೆದ ಯುವಕ ಸಾವು

ಜಾಹೀರಾತು/Advertisment
ಜಾಹೀರಾತು/Advertisment

 ಈಜುಕೊಳದಲ್ಲಿ ಡೈ ಹೊಡೆದ ಯುವಕ ಸಾವು

ಮೂಡುಬಿದಿರೆ: ಇಲ್ಲಿಗೆ ಸಮೀಪದ ಹೊಸಬೆಟ್ಟು ಗ್ರಾ.ಪಂಚಾಯತ್ ವ್ಯಾಪ್ತಿಯ ಬೊಗ್ರುಗುಡ್ಡೆ ಬಳಿ ಇರುವ ಹೋಂ ಸ್ಟೇಯ ಈಜುಕೊಳದಲ್ಲಿ ಡೈ ಹೊಡೆದ ಯುವಕನೋರ್ವನ ತಲೆಗೆ ಬಲವಾದ ಏಟು ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ನಡೆದಿದೆ.

  ಸಾವನ್ನಪ್ಪಿದ ಯುವಕ ಮಂಜೇಶ್ವರದ ಪುನೀತ್ ಕೃಷ್ಣ ಮೂಲ್ಯ (29ವ) ಎಂದು ತಿಳಿದು ಬಂದಿದೆ.

  ಸುಮಾರು ಜನ ಸಹೋದರ ಸಂಬಂಧಿಗಳು ಹೋಂ ಸ್ಟೇಗೆ ಬಂದಿದ್ದು ಅದರಲ್ಲಿ ಒಂದೇ ಕುಟುಂಬದ ಮೂವರು ಸಹೋದರರು ಇದ್ದರು. ಅವರಲ್ಲಿ ಎರಡನೆಯ ಯುವಕ  ಈಜು ಕೊಳದಲ್ಲಿ ಈಜುತ್ತಿರುವ  ಸಂದರ್ಭದಲ್ಲಿ ನೀರಿಗೆ ಡೈ ಹೊಡೆದಿದ್ದಾನೆ ಈ ಸಂದರ್ಭ ಆಯತಪ್ಪಿ ಯುವಕನ ತಲೆ ನೆಲಕ್ಕೆ ಬಡಿದು ತೀವೃ ತರಹದ ಗಾಯವಾಗಿ ಸಾವನ್ನಪ್ಪಿದ್ದಾನೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments