ಕಂಬಳ ಪರಿವಾರ ವರ್ಗದವರಿಗೆ ಉಚಿತ ವಿಮೆ

ಜಾಹೀರಾತು/Advertisment
ಜಾಹೀರಾತು/Advertisment

 ಕಂಬಳ ಪರಿವಾರ ವರ್ಗದವರಿಗೆ ಉಚಿತ ವಿಮೆ

ಮೂಡುಬಿದಿರೆ: ಪಟ್ಲ ಫೌಂಡೇಶನ್ ನೇತೃತ್ವದಲ್ಲಿ ಕಂಬಳ ಪರಿವಾರ ವರ್ಗದ ಸದಸ್ಯರಿಗೆ ಉಚಿತ ವಿಮಾ ಯೋಜನೆಯನ್ನು ಅಳವಡಿಸಲು ಯೋಚಿಸಿರುವುದಾಗಿ ಅವಿಭಜಿತ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ತಿಳಿಸಿದ್ದಾರೆ.


ಮೂಡುಬಿದಿರೆ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಂಬಳದ ಕೋಣಗಳ ಮಾಲಕರು, ಓಟಗಾರರು ಹಾಗೂ ಪರಿವಾರ ವರ್ಗದವರ ಅಗತ್ಯವನ್ನು ಪರಿಗಣಿಸಿ ಉಚಿತ ವಿಮೆಯನ್ನು ಅಳವಡಿಸಲಾಗುವುದು ಎಂದರು.


ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಮೇ. 26ರಂದು ನಡೆಯುವ ಸಮಾರಂಭದಲ್ಲಿ ಈ ಇನ್ಸೂರೆನ್ಶ್ ಯೋಜನೆಯನ್ನು ಅನಾವರಣಗೊಳಿಸಲಾಗುವುದು ಎಂದು ಅವರು ತಿಳಿಸಿದರು. ಇನ್ಸೂರೆನ್ಶ್ ಪ್ರಯೋಜನ ಪಡೆಯಲು ಆಸಕ್ತರು 2 ಫೋಟೋ, ಆಧಾರ್ ಕಾರ್ಡ್ ಪ್ರತಿ, ನಾಮಿನಿಯವರ ಆಧಾರ್ ಕಾರ್ಡ್ ಪ್ರತಿ ಹಾಗೂ 1 ಫೋಟೋದೊಂದಿಗೆ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮತ್ತು ತೀರ್ಪುಗಾರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

Post a Comment

0 Comments