*ಮಂಗಳೂರು :ಗಾಂಜಾ ಮಾರಾಟದ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ*
ಮೂಡುಬಿದಿರೆ : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಬಂಧನಕೊಳ್ಳಗಾಗಿದ್ದ ಆರೋಪಿಗಳಿಗೆ ಮಂಗಳೂರಿನ 6 ನೇ ಜೆಎನ್ಎಫ್‌ಸಿ ನ್ಯಾಯಾಲಯ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ ಒಂದು ಸಾವಿರ ರೂ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.
ಮಂಗಳೂರಿನ ಜಿಲ್ಲಾ ಕಾರಾಗೃಹದ ಬಳಿ ಇರುವ ಡಯೆಟ್ ಕಾಲೇಜ್ ಬಳಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ವನ್ನೂ ಇಟ್ಟುಕೊಂಡಿದ್ದ ಆರೋಪದಡಿ ಆರೋಪಿಗಳಾದ ಮಂಗಳೂರು ತೋಟ ಬೆಂಗ್ರೆ ನಿವಾಸಿ ದೀಕ್ಷಿತ್ ನಾಯಕ್, ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿ ಕಾರ್ತಿಕ್ ಇವರ ವಿರುದ್ಧ ಬರ್ಕೆ ಪೊಲೀಸರು N D P S ಕಾಯಿದೆ ಕಲಂ 8(c),20( b)ii a ಪ್ರಕಾರ ದೂರು ದಾಖಲಿಸಿ ತನಿಖೆ ನಡೆಸಿ ಆಗಿನ ಪೋಲಿಸ್ ಉಪ ನಿರೀಕ್ಷಕರಾದ ಶೋಭಾ ಅವರು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮಂಗಳೂರಿನ 6 ನೇ J M FC ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪೂಜಶ್ರಿ ಅವರು ಆರೋಪಿಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ತಲಾ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ದಂಡ ತೆರಲು ತಪ್ಪಿದಲ್ಲಿ 10 ದಿನಗಳ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಬಿ ಜನಾರ್ಧನ್ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ.
0 Comments