ಸಾಮಾನ್ಯರಲ್ಲಿ ಅಸಾಮಾನ್ಯ ಛಲಬಿಡದ ಸಾಧಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 546 ಅಂಕ ಪಡೆದು ಉತ್ತಮ ದರ್ಜೆಯಲ್ಲಿ ತೇರ್ಗಡೆ
ವಿಶೇಷಚೇತನ ಗೌರವಾಸನ್ಮಾನ
ಸಾಮಾನ್ಯರಲ್ಲಿ ಅಸಾಮಾನ್ಯ ಛಲಬಿಡದ ಸಾಧಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 546 ಅಂಕ ಪಡೆದು ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಲ್ಲದೇ, ತಾವು ಕಲಿತ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಗೆ ತೃತೀಯ ಸ್ಥಾನ ಫಲಿತಾಂಶ ದಾಖಲಿಸಿದ ವಿಶೇಷಚೇತನ ಬಡಗಾಬೆಟ್ಟು ವಿಶ್ರಾಂತ ಯೋಧ ಶ್ರೀ ಉದಯಕುಮಾರ್ ಮತ್ತು ಶ್ರೀಮತಿ ವಂದನಾ ದಂಪತಿಯ ಏಕಮಾತ್ರ ಪುತ್ರರಾದ *ಚಿನ್ಮಯ ಭಟ್* ಬಡಗಬೆಟ್ಟು ಇವರ ಸಾಧನೆಯನ್ನು ಗೌರವಿಸಿ ಅಜ್ಜಿಮನೆ ಫ್ರೆಂಡ್ಸ್ ಸಂಪಿಗೆ ಮತ್ತು ವಿಪ್ರ ಬಾಯ್ಸ್ ಮೂಡುಬಿದಿರೆ ಬಾಂಧವರು ಗೌರವಾದರಪೂರ್ವಕವಾಗಿ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ವಿಪ್ರ ಬಾಯ್ಸ್ ಮೂಡುಬಿದಿರೆ ಕ್ರಿಕೇಟ್ ತಂಡದ ನಾಯಕ ರಾಜೇಶ್ ಭಟ್ ಪುತ್ತಿಗೆ, ಸ್ವರಾಜ್ ಅಶ್ವತ್ಥಪುರ, ಅಜ್ಜಿಮನೆ ಫ್ರೆಂಡ್ಸ್ ಸಂಪಿಗೆ ಇದರ ಸದಸ್ಯರುಗಳಾದ ಚೈತನ್ಯ, ಶುಭಕರ್, ವೆಂಕಟೇಶ್, ವಿಕಾಸ್, ಸಚಿನ್, ರಾಘವೇಂದ್ರ, ಸಂದೇಶ್, ಮಂಜುನಾಥ್, ನಿತಿನ್ ಹಾಗೂ ಬಾರೆಂಗಳ-ಬಡಗಬೆಟ್ಟು ಬಂಧು ಮಿತ್ರರು ಉಪಸ್ಥಿತರಿದ್ದರು. ಸುರೇಂದ್ರ ಕುತ್ಕರಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಚಿನ್ಮಯ್ ತಂದೆ ಉದಯ ಬಡಗಬೆಟ್ಟು ಮಾತನಾಡಿ ತಮ್ಮ ಮಗನ ಜೀವನ ಮತ್ತು ವಿಧ್ಯಾಭ್ಯಾಸದ ಬಗ್ಗೆ ವಿಸ್ತಾರವಾಗಿ ವಿವರಿಸಿದರು, ಸಾಧಕ ಚಿನ್ಮಯ್ ತನ್ನ ತಂದೆ ಮತ್ತು ತಾಯಿಯ ನಿರೀಕ್ಷೆ ಶೇ.90% ಇತ್ತು, ಹಾಗಾಗಿ ಮರು ಮೌಲ್ಯಮಾಪನಕ್ಕೆ ಹಾಕಿರುತ್ತೇವೆ, ತಂದೆ-ತಾಯಿಯ ಶ್ರಮಕ್ಕೆ ಸ್ವಲ್ಪ ಮಟ್ಟಿನ ಬೆಲೆ ಕೊಟ್ಟಿದ್ದೇನೆ, ಇನ್ನು ಮುಂದಕ್ಕೂ ನಾನು ಅವರ ಶ್ರಮಕ್ಕೆ ಕೀರ್ತಿ ತರುವೆನೆಂದು ಹೇಳುತ್ತಾ ಬಂದ ಎಲ್ಲಾ ಬಂಧು-ಮಿತ್ರರಿಗೆ ಧನ್ಯವಾದ ಅರ್ಪಿಸಿದರು.
0 Comments