ಕಾಂಗ್ರೆಸ್ ಕಾರ್ಯಕರ್ತರು ಮಸಿ ಬಳಿದಿದ್ದ ಸಾವರ್ಕರ್ ಭಾವಚಿತ್ರಕ್ಕೆ ಹಾಲೆರೆದು ಶುದ್ಧ ಮಾಡಿದ ಭರತ್ ಶೆಟ್ಟಿ ಹಾಗೂ ತಂಡ
ಬೆಂಗಳೂರಿನ ಯಲಹಂಕದ ವೀರ ಸಾವರ್ಕರ್ ಮೇಲ್ ಸೇತುವೆಯಲ್ಲಿ ಅಳವಡಿಸಲಾಗಿದ್ದ ಸ್ವಾತಂತ್ರ್ಯವೀರ ಸಾವರ್ಕರ್ ರವರ ಭಾವಚಿತ್ರಕ್ಕೆ ಕಾಂಗ್ರೆಸ್ಸಿನ ವಿದ್ಯಾರ್ಥಿ ಘಟಕ ಎನ್ ಎಸ್ ಯು ಐ ಸಂಘಟನೆಯು ಮಸಿಬಳಿದ ಪ್ರಕರಣದ ನಂತರ ಇದೀಗ ಸಾವರ್ಕರ್ ಭಾವಚಿತ್ರಕ್ಕೆ ಹಾಲು ಎರೆಯುವ ಸಂದರ್ಭ. ವೀರ ಸಾವರ್ಕರ್ ಜನ್ಮದಿನವಾದ ನಿನ್ನೆ ಕಾಂಗ್ರೆಸ್ ವಿದ್ಯಾರ್ಥಿ ಘಟಕವು ಯಲಹಂಕ ಫ್ಲೈ ಓವರ್ ನಲ್ಲಿರುವ ವೀರ ಸಾವರ್ಕರ್ ಮೇಲ್ ಸೇತುವೆ ಇದರ ಪಕ್ಕದಲ್ಲಿ ಅಳವಡಿಸಿದ್ದ ಭಾವಚಿತ್ರಕ್ಕೆ ಮಸಿ ಬಳಿದು ವಿಕೃತಿ ಮೆರೆದಿತ್ತು. ಇದರಿಂದ ಆಕ್ರೋಶಿತರಾದ ದೇಶಪ್ರೇಮಿ ಸಂಘಟನೆಯ ಯುವಕರು ಯಲಹಂಕ ಮೇಲ್ ಸೇತುವೆಯ ಬಳಿ ಇರುವ ವೀರಸಾವರ್ಕರ್ ಭಾವಚಿತ್ರಕ್ಕೆ ಹಾಲನ್ನು ಎರೆದಿದ್ದಾರೆ. ಮಾತ್ರವಲ್ಲದೆ ಸಾವರ್ಕರನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಅಳವಡಿಸಿದ್ದ ಭಗತ್ ಸಿಂಗ್ ಭಾವಚಿತ್ರಕ್ಕೂ ಹಾಲು ಎರೆದು ಈ ಇಬ್ಬರೂ ನಮ್ಮ ಮಹಾನ್ ನಾಯಕರು. ಇಬ್ಬರಿಗೂ ನಮ್ಮ ಗೌರವ ಎಂದೆಂದಿಗೂ ಸಲ್ಲುತ್ತದೆ ಎಂದು ಹೇಳಿದರು. ಹಿಂದೂಪರ ಸಂಘಟನೆ ಸಂಘಟನೆಯ ಮುಖ್ಯಸ್ಥ ಹಾಗೂ ಯಲಹಂಕ ಮೇಲ್ ಸೇತುವೆಗೆ ವೀರ ಸಾವರ್ಕರ್ ಹೆಸರು ಇಡಬೇಕು ಎಂದು ಹೋರಾಟ ನಡೆಸಿದ್ದ ಭರತ್ ಶೆಟ್ಟಿ ಹಾಗೂ ತಂಡದವರು ವೀರ ಸಾವರ್ಕರ್ ಭಾವಚಿತ್ರಕ್ಕೆ ಹಾಲನ್ನು ಎರೆದಿದ್ದಾರೆ.
0 Comments