ನವಚೇತನಕ್ಕೆ 4 ವರ್ಷ:ಆರೋಗ್ಯ ಹಾಗೂ ಶಿಕ್ಷಣಕ್ಕೆ ಭರಪೂರ ಕೊಡುಗೆ

ಜಾಹೀರಾತು/Advertisment
ಜಾಹೀರಾತು/Advertisment

 ನವಚೇತನಕ್ಕೆ 4 ವರ್ಷ:ಆರೋಗ್ಯ ಹಾಗೂ ಶಿಕ್ಷಣಕ್ಕೆ ಭರಪೂರ ಕೊಡುಗೆ


ನವ ಚೇತನ ಸೇವಾ ಬಳಗ ತೋಡಾರು ಇದರ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಮೂಡುಬಿದಿರೆಯ ಶಿರ್ತಾಡಿಯಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಇದರ ಸಭಾಭವನದಲ್ಲಿ ನಡೆಯಿತು. ಮೂಡುಬಿದಿರೆ ಪುರಸಭೆಯ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಸದಸ್ಯರಾಗಿರುವ ಪ್ರಸಾದ್ ಕುಮಾರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಸೇವಾ ಚಟುವಟಿಕೆಯಲ್ಲಿ ನವಚೇತನ ಸೇವಾ ಬಳಗ ತಂಡವು ಕರಾವಳಿಯಲ್ಲಿ ಅತ್ಯುತ್ತಮ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ. ಅಬಲರ ಕೈಹಿಡಿದು ಅವರಿಗೆ ಊರುಗೋಲಾಗಿ ಕೆಲಸ ಮಾಡುತ್ತಿರುವ ನವಚೇತನ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.



ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕೊಣಾಜೆಯಲ್ಲಿ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಣಪಿಲ ಗ್ರಾಮದ ಶ್ರೀಮತಿ ಜಯಂತಿಯವರ ಚಿಕಿತ್ಸೆಯ ಪರಿಹಾರಾರ್ಥವಾಗಿ ಒಂದು ಲಕ್ಷ ರೂಪಾಯಿಯನ್ನು ನವಚೇತನ ಬಳಗದ ಸದಸ್ಯರು ಸಂಗ್ರಹಿಸಿದ್ದು  ಅದನ್ನು ವಿತರಣೆ ಮಾಡಿದರು. ಮತ್ತು ವಿದ್ಯಾನಿಧಿ ಮೂಲಕ ಸುಮಾರು 95 ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ಹಾಗೂ ಛತ್ರಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದಲ್ಲಿ ವಿವಿಧ ಸೇವಾ ಚಟುವಟಿಕೆಗಳಲ್ಲಿ ಸೇವೆಗೈದ ವಿವಿಧ ಸಂಘಟನೆಗಳನ್ನು ಮತ್ತು ಪ್ರಮುಖರನ್ನು ಗುರುತಿಸಲಾಯಿತು. ಸಭೆಯಲ್ಲಿ ಅಸ್ತ್ರ ಸೇವಾ ತಂಡದ ರೂವಾರಿ ಸುನಿಲ್ ಪಣಪಿಲ, ಅಳಿಯೂರು ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ  ಸುಧಾಕರ ಡಿ ಪೂಜಾರಿ, ಸಮಾಜ ಸೇವಕರಾದ ಅರ್ಜುನ್ ಭಂಡಾರ್ಕರ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಕುಮಾರ್ ಪ್ರಸಾದ್,  ಸಂತೋಷ್ ಅಂಚನ್, ನವ ಚೇತನ ಸೇವಾ ಬಳಗದ ಅಧ್ಯಕ್ಷರಾದ ವಿನಯ್ ಈದು ಬಟ್ಟೇಣಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ನಟರಾಜ್ ವಾಮಂಜೂರು ಇವರು ನಿರೂಪಿಸಿದರು ಹಾಗೂ ತಂಡದ ಸದಸ್ಯೆ ಶ್ರೀಮತಿ ಮಹಾಲಕ್ಷ್ಮಿ ಸ್ವಾಗತಿಸಿ ವಂದಿಸಿದರು.

Post a Comment

0 Comments