“ಮೀಫ್ ಎಕ್ಸಲೆನ್ಸ್ ಎವಾರ್ಡ್ 2024” - ಮೂಡುಬಿದಿರೆಯ ಅಲ್-ಫುರ್ಖಾನ್ ಇಸ್ಲಾಮಿ ಆಂಗ್ಲ ಮಾಧ್ಯಮ ಶಾಲೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿ
ಮೂಡುಬಿದಿರೆ: ಮಂಗಳೂರು ಪ್ರೆಸ್ಟೀಜ್ ಇಂಟರ್‌ನಾಶನಲ್ ಸ್ಕೂಲ್ ನಲ್ಲಿ ಮೇ.26 ರಂದು ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಮ್ ಅಲ್ಪ ಸಂಖ್ಯಾತ ವಿದ್ಯಾ ಸಂಸ್ಥೆಗಳ ಒಕ್ಕೂಟ (ಮೀಫ್) ಇದರ ವತಿಯಿಂದ ನಡೆದ "ಮೀಫ್ ಎಕ್ಸಲೆನ್ಸ್ ಅವಾರ್ಡ್ - 2024" ಕಾರ್ಯಕ್ರಮದಲ್ಲಿ ಮೂಡಬಿದಿರೆಯ ಪ್ರತಿಷ್ಟಿತ ವಿದ್ಯಾ ಸಂಸ್ಥೆ ಅಲ್-ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯು ಮೀಫ್ ಅಧೀನದ ಸದಸ್ಯ ಶಾಲೆಗಳ ಪೈಕಿ "ಅತ್ಯುತ್ತಮ ಶಾಲೆ” ಪ್ರಶಸ್ತಿಯನ್ನು ಪಡೆಯಿತು.
ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಶೇ.100 ಫಲಿತಾಂಶ ದಾಖಲಿಸಿದ ವಿದ್ಯಾ ಸಂಸ್ಥೆಗಳಿಗೆ ಪ್ರಶಸ್ತಿ ಪುರಸ್ಕಾರ ಮತ್ತು ಪ್ರತಿಭಾವಂತ, ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಘೋಷಿಸಲಾಯಿತು.
ಶಾಲೆಯು ೨೦೨೩-೨೪ನೇ ಸಾಲಿನ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆಗೈದಿರುತ್ತದೆ. ಪರೀಕ್ಷೆ ಬರೆದ 70 ವಿದ್ಯಾರ್ಥಿಗಳ ಪೈಕಿ 39 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು ಅತ್ಯಂತ ಅಧಿಕ ಡಿಸ್ಟಿಂಕ್ಷನ್ ಪಡೆದ ಶಾಲೆ ಪ್ರಶಸ್ತಿಯನ್ನು ತನ್ನದಾಗಿಸಿತು. ಕಲಿಕೆ ಹಾಗೂ ಪತ್ಯೇತರ ಚಟುವಟಿಕೆಗಳಲ್ಲಿ ಶಾಲೆಯು ಅಪ್ರತಿಮ ಸಾಧನೆಗೆಯ್ಯುವ ಮೂಲಕ ಅಲ್ ಫುರ್ಖಾನ್ ಇಸ್ಲಾಮಿಕ್ ಅಂಗ್ಲ ಮಾಧ್ಯಮ ಶಾಲೆಯು ಸತತ ದ್ವಿತೀಯ ವರ್ಷವೂ “ಅತ್ಯುತ್ತಮ ಶಾಲೆ'ಯಾಗಿ ಹೊರಹೊಮ್ಮಿದೆ. ಮೌಲ್ಯಯುತ ಶಿಕ್ಷಣಕ್ಕೆ ಒತ್ತನ್ನು ನೀಡುವ ಮೂಲಕ ಸಂಸ್ಥೆಯ ಸಾಧನೆಗೆ ಮುಂದುತ್ವವನ್ನು ನೀಡಿತ್ತಿರುವ ಶಾಲಾ ಪ್ರಾಂಶುಪಾಲೆ, ಉಪ ಪ್ರಾಂಶುಪಾಲ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯು ಪ್ರಶಂಸೆಯನ್ನು ವ್ಯಕ್ತಪಡಿಸಿದೆ.
0 Comments