ಶತಮಾನೋತ್ಸವ ಕಂಡ ಕಲ್ಲಬೆಟ್ಟು ಶಾಲೆ ಪಿಎಂ-ಶ್ರೀ ಯೋಜನೆಗೆ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಶತಮಾನೋತ್ಸವ ಕಂಡ ಕಲ್ಲಬೆಟ್ಟು ಶಾಲೆ ಪಿಎಂ-ಶ್ರೀ ಯೋಜನೆಗೆ ಆಯ್ಕೆ

ಮೂಡುಬಿದಿರೆ: ತಾಲೂಕಿನ  ಶತಮಾನೋತ್ಸವ ಕಂಡಿರುವ ಶಾಲೆಯಲ್ಲೊಂದಾಗಿರುವ ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕಲ್ಲಬೆಟ್ಟು  ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್  ಇಂಡಿಯಾ (ಪಿಎಂ-ಶ್ರೀ) ಯೋಜನೆಗೆ ಆಯ್ಕೆಯಾಗಿದೆ.

 

ಉತ್ತಮ ಶಿಕ್ಷಣ ಮತ್ತು ಕ್ರೀಡೆಯ ಮೂಲಕ ಗುರುತಿಸಿಕೊಂಡಿರುವ ಈ ಸರಕಾರಿ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಶಿಕ್ಷಕಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಶಾಲೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಿರುತ್ತಾರೆ.    ಪಿಎಂ-ಶ್ರೀ ಯೋಜನೆಯಡಿ ಆಯ್ಕೆಗೊಂಡಿರುವ ಈ ಶಾಲೆಯು ಮೂಲಭೂತ ಸೌಕರ್ಯದೊಂದಿಗೆ ಸರ್ವಾಂಗೀಣ ರೀತಿಯ ಅಭಿವೃದ್ಧಿ, ಆಧುನಿಕತೆಯ ಸ್ಪರ್ಶ ಪಡೆದುಕೊಳ್ಳಲಿದೆ ಮತ್ತು ಸಮಗ್ರ ಕಲಿಕೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಾನುಸಾರ ಒತ್ತು ನೀಡಲಿದೆ.

ಐದು ವರ್ಷದ ಯೋಜನೆಯಾಗಿರುವ ಈ ಪಿಎಂ-ಶ್ರೀ ಯೋಜನೆಯಡಿ ಆಯ್ಕೆಗೊಂಡಿರುವ ಶಾಲೆಯಲ್ಲಿ ಎಲ್ ಇಡಿ ದೀಪಗಳು, ತ್ಯಾಜ್ಯ ನಿರ್ವಹಣೆ, ಜಲಸಂರಕ್ಷಣೆ, ಜಲ ಕೊಯ್ಲು ವ್ಯವಸ್ಥೆ ಒದಗಿಸಲಾಗುತ್ತದೆ ಮತ್ತು ನ್ಯೂಟ್ರಿಷನ್ ತೋಟಗಳನ್ನು ನಿರ್ಮಿಸಲು ಅವಕಾಶಗಳಿವೆ.

   ಯೋಜನೆಯ ಮೊದಲನೇ ಹೆಜ್ಜೆಯಾಗಿ ಜೂನ್ ತಿಂಗಳಿನಿಂದ ಈ ಶಾಲೆಯಲ್ಲಿ ಎಲ್ ಕೆಜಿ ಶಿಕ್ಷಣ ಆರಂಭಗೊಳ್ಳಲಿದೆ. ಇದಕ್ಕೆ ಒಬ್ಬರು ಶಿಕ್ಷಕಿ ಮತ್ತು ಆಯಾ ಅವರನ್ನು ನೇಮಕ ಮಾಡಲಿದೆ.

  ಈ ಯೋಜನೆಗೆ ರಾಜ್ಯ ಸರಕಾರದ ಅನುದಾನ ಕೂಡ ಲಭಿಸಲಿದೆ. ಈ ಐದು ವರ್ಷದ ಯೋಜನೆ ಪೂರ್ಣಗೊಂಡಾಗ ಶಾಲೆ ಸರ್ವ ಸವಲತ್ತುಗಳೊಂದಿಗೆ ಸಜ್ಜಾಗಿರುತ್ತದೆ. ಕಳೆದ ವರ್ಷ ತಾಲೂಕಿನ ಮೂಡು ಮಾರ್ನಾಡು ಶಾಲೆಯು ಈ ಯೋಜನೆಗೆ ಆಯ್ಕೆಯಾಗಿದ್ದು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.

  ಜಿ.ಪಂ.ಉನ್ನತೀಕರಿಸಿದ ಕಲ್ಲಬೆಟ್ಟು ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಮಾರ್ಗರೇಟ್ ಅವರು ಶಾಲೆಯು ಪಿಎಂ-ಶ್ರೀ ಯೋಜನೆಗೆ ಆಯ್ಕೆಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಯೋಜನೆಗೆ ಸಂಬಂಧಪಟ್ಟಂತೆ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

Post a Comment

0 Comments