ವಿಶ್ವ ಆರೋಗ್ಯ ದಿನ ಮೂಡುಬಿದಿರೆಯಲ್ಲಿ ವಿವಿಧ ಕ್ಲಬ್ ಗಳಿಂದ ಸೈಕಲ್ ರ್ಯಾಲಿ

ಜಾಹೀರಾತು/Advertisment
ಜಾಹೀರಾತು/Advertisment

 ಏ.7: ವಿಶ್ವ ಆರೋಗ್ಯ ದಿನ

 ಮೂಡುಬಿದಿರೆಯಲ್ಲಿ ವಿವಿಧ ಕ್ಲಬ್ ಗಳಿಂದ ಸೈಕಲ್ ರ್ಯಾಲಿ

ಮೂಡುಬಿದಿರೆ: ವಿಶ್ವ ಆರೋಗ್ಯ ದಿನದ ಅಂಗವಾಗಿ ಇಲ್ಲಿನ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್  ಮತ್ತು ವಿವಿಧ ಕ್ಲಬ್ ಗಳ ವತಿಯಿಂದ ಆಳ್ವಾಸ್ ವಿದ್ಯಾ ಸಂಸ್ಥೆಯ ಸಹಕಾರದೊಂದಿಗೆ "ಸೈಕ್ಲಿಂಗ್ ಫಾರ್ ಗ್ರೀನ್ ಆಂಡ್ ಹೆಲ್ತಿ ಮೂಡುಬಿದಿರೆ" ಎಂಬ ಧ್ಯೇಯ ವಾಕ್ಯದೊಂದಿಗೆ ಏ.7ರಂದು ಸೈಕಲ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷ ಫರಾಝ್ ಬೆದ್ರ ಹೇಳಿದರು.



  ಅವರು ಶುಕ್ರವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ  ಸೈಕಲ್ ರ್ಯಾಲಿ ಬಗ್ಗೆ ಮಾಹಿತಿ ನೀಡಿದರು.

  ಈ ರ್ಯಾಲಿಯು ಬಡಗ ಬಸ್ತಿಯ ಎದುರು ಬಳಿಯಿಂದ ಆಲಂಗಾರು ಜಂಕ್ಷನ್ ಮುಖಾಂತರ ರಿಂಗ್ ರೋಡ್, ಸ್ವರಾಜ್ಯ ಮೈದಾನ, ನಿಶ್ಮಿತಾ ಟವರ್ಸ್ ಮುಖ್ಯರಸ್ತೆಯಿಂದ ಹಾದು ಜೈನ್ ಹೈಸ್ಕೂಲ್ ಮುಖಾಂತರ ಫಾರ್ಚುನ್ ಹೈವೆ ಕಟ್ಟಡದ ಹತ್ತಿರ ಅಂತ್ಯಗೊಳ್ಳುವುದು.

 ಸುಮಾರು 5 ಕಿ.ಮೀ ದೂರ ಕ್ರಮಿಸಲಿರುವ ಈ ರ್ಯಾಲಿಯನ್ನು ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಡಾ.ರಮೇಶ್ ಉದ್ಘಾಟಿಸಲಿರುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿರುವರು. ಈ ರ್ಯಾಲಿಯಲ್ಲಿ ಭಾಗವಹಿಸುವವರಿಗೆ ಲಕ್ಕಿ ಡ್ರಾ ಮೂಲಕ ಒಂದು ಸೈಕಲನ್ನು ನೀಡಲಾಗುವುದು ಎಂದು ತಿಳಿಸಿದರು.

ರೀವನ್ ಸಿಕ್ವೇರಾ‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments