ಶ್ರೀಮತಿ ಮಮತಾ ಕೇಶವ ಅವರು ಭಾರತೀಯ ಜನತಾ ಪಾರ್ಟಿಯ ವೃತ್ತಿಪರ ಪ್ರಕೊಷ್ಟದ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಶ್ರೀಮತಿ ಮಮತಾ ಕೇಶವ ಅವರು ಭಾರತೀಯ ಜನತಾ ಪಾರ್ಟಿಯ ವೃತ್ತಿಪರ ಪ್ರಕೊಷ್ಟದ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆ


ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಡಾ. ಮಮತಾ ಕೇಶವ್ ಅವರು ಕಳೆದ ಅನೇಕ ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೋವಿಡ್‌ ಮಹಾಮಾರಿಯ ಆರ್ಭಟದ ನಡುವೆಯೂ ಪ್ರತಿನಿತ್ಯ ಸರಿ ಸುಮಾರು 600 ಜನ ಬೀದಿ ಬದಿಯಲ್ಲಿನ ನಿರ್ಗತಿಕರಿಗೆ 3 ಹೊತ್ತು ಆಹಾರ ಒದಗಿಸಿದವರು.‌ ಮಾತ್ರವಲ್ಲದೆ ಕೋವಿಡ್ ಸೋಂಕಿತರಿಗೆ ಆಂಬ್ಯುಲೆನ್ಸ್ ವ್ಯವಸ್ಥೆ, ಅನೇಕ ಬಡ ಕುಟುಂಬಗಳ‌ ಪಾಲನೆ, ಅನೇಕ ಕೋವಿಡ್ ಸೋಂಕಿತರು ಗುಣಮುಖರಾಗುವ ವರೆಗೆ ಅವರ ಆರೈಕೆ ಹಾಗೂ ಊಟೋಪಚಾರದ‌ ವ್ಯವಸ್ಥೆಯನ್ನು ಮಾಡುವ ಮೂಲಕ ಹಲವು ಬಡಾ ಹೆಣ್ಣು ಮಕ್ಕಳ ಮದುವೆ ಕಾರ್ಯಗಳಿಗೆ ತನ್ನಲ್ಲಿ  ಎಷ್ಟು ಆಗುತ್ತೋ ಅಷ್ಟೂ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ ಅಶಕ್ತರ ಪಾಲಿಗೆ ಆಪತ್ಬಾಂದವರಂತೆ ಕಾರ್ಯ ನಿರ್ವಹಿಸಿದ್ದಾರೆ. ಈಗಲೂ ಕೂಡ‌ ಸಾಕಷ್ಟು ಅಶಕ್ತ ಕುಟುಂಬಗಳಿಗೆ ಬೆನ್ನೆಲುಬಾಗಿ ನಿಂತು ಸೇವಾ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. 





ಇವರ ಈ ಸೇವಾ ಮನೋಭಾವವನ್ನು ಗುರುತಿಸಿ ಹೊಸುರು ಏಷ್ಯಾ ಕಲ್ಚರಲ್ ಯೂನಿವರ್ಸಿಟಿ‌ಯವರು ಗೌರವ‌ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ. ಮಾತ್ರವಲ್ಲದೆ ಸೆಪ್ಟೆಂಬರ್ 27 ನೇ ತಾರೀಕಿನಂದು ದೆಹಲಿಯಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ರಾಷ್ಟ್ರೀಯ ಐಕಾನಿಕ್ ಪ್ರಶಸ್ತಿ ‌ನೀಡಿ ಗೌರವಿಸಿದ್ದಾರೆ. ಹಾಗೂ ಅಕ್ಟೋಬರ್ 14 ರಂದು ಹೃದಯ ವಾಹಿನಿ ಲಯನ್ಸ್ ಇಂಟರ್ ನ್ಯಾಷನಲ್ ಅವರಿಂದ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಗ್ಲೋಬಲ್ ಮೆನ್ ಅವಾರ್ಡ್  ಹಾಗು ಅಂತರಾಷ್ಟ್ರೀಯ ಸಾಧನೆ ಐಕಾನ್ ಪ್ರಶಸ್ತಿ ,ಕರ್ನಾಟಕ ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ನೀಡಿ ಅವರ ಸೇವಾ ಕಾರ್ಯಗಳಿಗೆ ಗೌರವ ಸಲ್ಲಿಸಿದ್ದಾರೆ.‌ ಇವರಿಂದ ಭಗವಂತ ಇನ್ನಷ್ಟು ಸಾಮಾಜಿಕ ಕಾರ್ಯಗಳು ನಡೆಸುವಂತಾಗಲಿ ಎಂದು ಹಾರಿಸುತ್ತೇವೆ.

Post a Comment

0 Comments