ಡಾ. ವಾದಿರಾಜ ಕಲ್ಲೂರಾಯರಿಗೆ ಐಡಿಯಲ್ ಲೆಕ್ಚರರ್ ಎವಾರ್ಡ್
ಮೂಡುಬಿದಿರೆ: ಬೆಂಗಳೂರಿನ ವಿಷ್ಣು ಶೇಷ ಶಾಸ್ತ್ರಿ ಚಾರಿಟೇಬಲ್ ಟ್ರಸ್ಟ್ ಕೊಡಮಾಡುವ, ' ಐಡಿಯಲ್ ಲೆಕ್ಚರರ್ ಎವಾರ್ಡ್ ' ಗೆ ದ.ಕ.ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಇವರು ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ವಶಿಷ್ಠ ಶಾಸ್ತ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಲೆ, ಬರೆಹ, ಚಿಂತನ, ನಾಟಕ, ನಿರೂಪಣೆಗಳ ಮೂಲಕ ಕ್ರಿಯಾಶೀಲರಾಗಿರುವ ಉಪನ್ಯಾಸಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಕಲ್ಲೂರಾಯರು ಉಪನ್ಯಾಸಕರಾಗಿರುವ ಜತೆಗೆ ಕಟೀಲು 4ನೇ ಮೇಳದ ಕಲಾವಿದರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿ ಯು ರೂ. 10,000 ಗೌರವಧನ ಹೊಂದಿದ್ದು ಪ್ರಶಸ್ತಿ ಪ್ರದಾನ ಸಮಾರಂಭವು ಎ.21ರಂದು ನಡೆಯಲಿದೆ ಎಂದವರು ತಿಳಿಸಿದ್ದಾರೆ.
ಕಲ್ಲೂರಾಯರಿಗೆ ಈ ಹಿಂದೆ ಮಂದಾರ ಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪುರಸ್ಕಾರ, ಅಗರಿ ವಿಶೇಷ ಸಮ್ಮಾನ್, ಮುಂಬೈ ಆಸ್ರಣ್ಣ ಸಮಿತಿ ಪ್ರಶಸ್ತಿ, ಯುವವಾಗ್ಮಿ ಪ್ರಶಸ್ತಿ ಲಭಿಸಿವೆ.
0 Comments