ಆಳ್ವಾಸ್ ಟೆಕ್ನಾಲಜಿ ಸೆಂಟರ್ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಆಳ್ವಾಸ್ ಟೆಕ್ನಾಲಜಿ ಸೆಂಟರ್ ಉದ್ಘಾಟನೆ

ತಾಂತ್ರಿಕ ಶಿಕ್ಷಣದೊಂದಿಗೆ ಕೌಶಲ್ಯ ಅಳವಡಿಸಿಕೊಳ್ಳುವುದು ಅಗತ್ಯ : ಪ್ರೊ.ಟಿ.ಜಿ.ಸೀತಾರಾಮ್


ಮೂಡುಬಿದಿರೆ : ಭಾರತದ ಯುವ ಜನರಲ್ಲಿ ಕೌಶಲ್ಯದ ಮಟ್ಟ ಏರಬೇಕಾದರೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಣ ಸಂಸ್ಥೆಗಳು ತಾಂತ್ರಿಕ ಶಿಕ್ಷಣದೊಂದಿಗೆ ಕೌಶಲ್ಯ ಅಳವಡಿಸಿಕೊಳ್ಳುವುದು ಮುಖ್ಯ. ಕಂಪನಿಗಳು ಕೌಶಲ್ಯ ತರಬೇತಿ ನೀಡಲು ಬಯಸುವುದಿಲ್ಲ. ಶಿಕ್ಷಣ ಸಂಸ್ಥೆಗಳೇ ತರಬೇತಿ ನೀಡಿದಾಗ ಅಂತಹ ಶಿಕ್ಷಣ ಸಂಸ್ಥೆಯಿಂದ ಹೊರಬಂದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಚೇರ್‌ಮೆನ್ ಫ್ರೊ. ಟಿ.ಜಿ ಸೀತಾರಾಮ್ ಹೇಳಿದರು.  


  ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಳ್ವಾಸ್ ಟೆಕ್ನಾಲಜಿ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿದರು. 

 ಭಾರತದಲ್ಲಿ ಪ್ರಸ್ತುತ ೧.೨೫ಲಕ್ಷ ಸ್ಟಾರ್ಟಪ್ ಕಂಪನಿಗಳಿವೆ. ಈ ಪೈಕಿ ೧೨೫ ಸ್ಟಾರ್ಟಪ್ ಕಂಪನಿಗಳು ಯುನಿಕಾರ್ನ್ ಆಗಿವೆ. ಈ ಕಂಪನಿಗಳು ೪೫೦ ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿವೆ. ಶೇ.೨೫ರಷ್ಟು ಆದಾಯ ವಿದೇಶದಿಂದ ಹರಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ವಿಶ್ವದ ಸ್ಟಾರ್ಟಪ್ ರಾಜಧಾನಿಯಾಗಲಿದೆ.

 ಭಾರತದಲ್ಲಿ ಪ್ರಸ್ತುತ ೮೦ ಸಾವಿರಕ್ಕೂ ಅಧಿಕ ಪೇಟೆಂಟ್‌ಗಳನ್ನು ದಾಖಲಿಸಿದೆ ಎಂದ ಅವರು  ೨೦೪೭ರ ವಿಕಸಿತ ಭಾರತದ ಗುರಿ ಕನಸಾಗದೆ ನನಸಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು. 


ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‌ನ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್ ಸ್ವಾಗತಿಸಿದರು. ಉಪನ್ಯಾಸಕಿ ಸಾಕ್ಷಿ ಕಾಮತ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Post a Comment

0 Comments