ದೇಶದ 540 ಬಿಜೆಪಿ ಅಭ್ಯರ್ಥಿಗಳಲ್ಲಿ ಕೋಟ ನಂಬರ್ ವನ್-ಮೋದಿಯ ಆಯ್ಕೆ ಕೋಟರವರನ್ನು ಗೆಲ್ಲಿಸಿ- ಅಣ್ಣಮಲೈ
ದೇಶದಲ್ಲಿ ಚುನಾವಣಾ ರಣಕಣ ರಂಗೇರಿದ್ದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬ್ರಹ್ಮಾವರ ಕುಂದಾಪುರ ಹಾಗೂ ಹೆಬ್ರಿಯಲ್ಲಿ ಬೃಹತ್ ರೋಡ್ ಶೋ ನಡೆಯಿತು. ತಮಿಳುನಾಡು ಭಾರತೀಯ ಜನತಾ ಪಾರ್ಟಿಯ ರಾಜ್ಯ ಅಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಮಲೈ ಯವರ ನೇತೃತ್ವದಲ್ಲಿ ನಡೆದ ಬೈಕ್ ಜಾಥಾದಲ್ಲಿ 5000ಕ್ಕೂ ಅಧಿಕ ವಾಹನಗಳು ಕುಂದಾಪುರದಲ್ಲಿ ಮತ್ತು ಬ್ರಹ್ಮಾವರ ಹೆಬ್ರಿಗಳಲ್ಲಿ ಉತ್ತಮ ಸಂಖ್ಯೆಯ ಕಾರ್ಯಕರ್ತರು ಸೇರಿದ್ದರು.
ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅಣ್ಣಮಲೈ ಕೋಟ ಶ್ರೀನಿವಾಸ ಪೂಜಾರಿಯವರನ್ನು ದೇಶದ ನಂಬರ್ ಒನ್ ಅಭ್ಯರ್ಥಿ ಎಂದು ಬಣ್ಣಿಸಿದರು. ನನ್ನನ್ನು ಸೇರಿದಂತೆ ದೇಶದ 543 ಬಿಜೆಪಿ ಅಥವಾ ಎನ್‌ಡಿಎ ಅಭ್ಯರ್ಥಿಗಳ ಪೈಕಿ ಕೋಟ ಶ್ರೀನಿವಾಸ ಪೂಜಾರಿಯವರು ಫಸ್ಟ್ ನಂಬರ್ ನಲ್ಲಿ ಇರುತ್ತಾರೆ. ಅಷ್ಟೊಂದು ಪ್ರಾಮಾಣಿಕತೆ ಅಷ್ಟೊಂದು ಸರಳತೆ ಹಾಗೂ ಜೀರೋ ಬ್ರಷ್ಟಾಚಾರ ಹೊಂದಿರುವಂತಹ ವ್ಯಕ್ತಿ ಕೋಟ ಶ್ರೀನಿವಾಸ ಪೂಜಾರಿ. ಸ್ವತಃ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೇ ಕೋಟ ಶ್ರೀನಿವಾಸ ಪೂಜಾರಿಯವರನ್ನು ಆಯ್ಕೆ ಮಾಡಿದ್ದು ಅವರ ಯೋಚನೆ ಕನಸು ಬೇರೆನೇ ಇರಬಹುದು. ಹೀಗಾಗಿ ಕೋಟ ಶ್ರೀನಿವಾಸ ಪೂಜಾರಿಯವರು ಗೆಲ್ಲುವುದು ಖಚಿತ ಆದರೆ ಈ ಗೆಲುವು ರಾಜ್ಯ ಹಾಗೂ ರಾಷ್ಟ್ರದಲ್ಲಿ ದಾಖಲೆಯ ಗೆಲುವಾಗಬೇಕು ಇದಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಕರೆಕೊಟ್ಟರು. ಈ ಸಂದರ್ಭದಲ್ಲಿ ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಪ್ರಮೋದ್ ಮದ್ವರಾಜ್ ರಘುಪತಿ ಭಟ್ ಹಾಗೂ ಇತರ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
0 Comments