ಪಾಕ್ ಪರ ಘೋಷಣೆ ವಿರೋಧಿಸಿ ಮೂಡುಬಿದಿರೆಯಲ್ಲಿ ಬಿಜೆಪಿ ಮಂಡಲದಿಂದ ಪ್ರತಿಭಟನೆ
ಮೂಡುಬಿದಿರೆ: ನಾಸೀರ್ ಹುಸೇನ್ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ವೇಳೆ ವಿಧಾನಸೌಧದಲ್ಲಿ ಪಾಕಿಸ್ಥಾನ ಪರ ಘೋಷಣೆ, ರಾಮೇಶ್ವರದಲ್ಲಿ ನಡೆದ ಬಾಂಬ್ ಸ್ಫೋಟವನ್ನು ಖಂಡಿಸಿ ಭಯೋತ್ಪಾದಕರ ಪ್ರೇಮಿ ರಾಜ್ಯ ಸರಕಾರದ ವಿರುದ್ಧ ಮೂಡುಬಿದಿರೆ ಬಿಜೆಪಿ ಮಂಡಲದ ವತಿಯಿಂದ ಮಂಗಳವಾರ ನಿಶ್ಮಿತಾ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಉಗ್ರರಿಗೆ ತಮ್ಮ ಪರ ಸರಕಾರವಿದೆ ಎಂಬ ವಿಶ್ವಾಸವಿದೆ. ಭ್ರಷ್ಟಾಚಾರದ ಸರಕಾರವು ಇರುವವರೆಗೆ ಇಂತಹ ಘಟನೆಗಳು ನಡೆಯುತ್ತಾ ಇರುತ್ತವೆ ಎಂದರು.
ಮಂಡಲದ ನೂತನ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರುಗಳಾದ ಸುನಿಲ್ ಆಳ್ವ, ಶಾಂತಿ ಪ್ರಸಾದ್ ಹೆಗ್ಡೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್, ಕಿಶೋರ್ ಕುಮಾರ್ ಬೊಟ್ಯಾಡಿ, ಮಂಡಲ ಉಸ್ತುವಾರಿ ಜಯಂತ್ ಕೋಟ್ಯಾನ್, ಚುನಾವಣಾ ಸಂಚಾಲಕರಾದ ಚಂದ್ರಶೇಖರ ರಾವ್, ಜಿಲ್ಲಾ ಕಾರ್ಯದರ್ಶಿಗಳಾದ ಕವಿತ ದಿನೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ನಂದನ್ ಮಲ್ಯ, ಜಿಲ್ಲಾ ಎಸ್. ಸಿ ಮೋರ್ಚಾ ಅಧ್ಯಕ್ಷರಾದ ಜಗನ್ನಾಥ ಬೆಳುವಾಯಿ, ಪ್ರಮುಖರಾದ ಕೆ.ಆರ್ ಪಂಡಿತ್,ಬಾಹುಬಲಿ ಪ್ರಸಾದ್, ಕೃಷ್ಣರಾಜ ಹೆಗ್ಡೆ,ಭುವನಭಿರಾಮ ಉಡುಪ, ರಮಾನಾಥ ಅತ್ತಾರ್, ಈಶ್ವರ್ ಕಟೀಲ್, ಕಸ್ತೂರಿ ಪಂಜ,ಮೇಘನಾಥ ಶೆಟ್ಟಿ,ರಘುರಾಮ್ ಪುನರೂರು ಮಂಡಲ ಪ್ರಧಾನ ಪುನರೂರು ಮಂಡಲ ಪ್ರಧಾನ
ಕಾರ್ಯದರ್ಶಿಗಳಾದ ರಂಜಿತ್
ಪೂಜಾರಿ, ಹರಿಪ್ರಸಾದ್ ಶೆಟ್ಟಿ,
ಮಂಡಲ ಉಪಾಧ್ಯಕ್ಷರಾದ
ಸುಕೇಶ್ ಶೆಟ್ಟಿ ಶಿರ್ತಾಡಿ, ವಿನೋದ್
ಬೊಳ್ಳೂರು, ರಂಗನಾಥ್ ಶೆಟ್ಟಿ, ಕೇಶವ ಬಿ.ಕರ್ಕೇರ, ಸುಮಾ ಶೆಟ್ಟಿ, ಸೂರಜ್ ಜೈನ್, ಕಾರ್ಯದರ್ಶಿಗಳಾದ ಸುಭಾಸ್
ಶೆಟ್ಟಿ, ಸಾತ್ವಿಕ್ ಮಲ್ಯ, ಮಮತಾ
ದಿವಾಕರ್ ಪೂಂಜಾ, ಗಣೀಶ್
ಬಿ ಅಳಿಯೂರು, ಪ್ರೇಮನಾಥ್
ಶೆಟ್ಟಿ, ಪೂರ್ಣಿಮಾ ಹಳೆಯಂಗಡಿ,
ಪ್ರಭಾಕರ್ ಕುಲಾಲ್ ಪಳಕಳ,
ವಿದ್ಯಾನಂದ ಶೆಟ್ಟಿ ಹಾಗೂ ವಿವಿಧ
ಮೋರ್ಚಾ ಹಾಗೂ ಪ್ರಕೋಷ್ಠಗಳ
ಪದಾಧಿಕಾರಿಗಳು, ಕಾರ್ಯಕರ್ತರು
ಉಪಸ್ಥಿತರಿದ್ದರು.
0 Comments