ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಮೂಡುಬಿದಿರೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ) ಮೂಡುಬಿದಿರೆ ಘಟಕದ ಆಶ್ರಯದಲ್ಲಿ ಕುಂಭಕಂಠಿಣಿ ಸೇವಾ ಬಳಗ ಮಾರೂರು, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಮಹಿಳಾ ಘಟಕ ಗುಡ್ಡಲಂಗಡಿ ಮಾರೂರು, ಹೊಸ ಕನಸು ಸೇವಾ ಟ್ರಸ್ಟ್ (ರಿ)ನೆತ್ತೋಡಿ, ನಮೋ ಫ್ರೆಂಡ್ಸ್ ಕ್ಲಬ್ ಇವುಗಳ ಸಹಕಾರದೊಂದಿಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ಬೃಹತ್ ಉಚಿತ ವೈದ್ಯಕೀಯ ಶಿಬಿರ ಹಾಗೂ ಯೆನಪೋಯ ದಂತ ಆಸ್ಪತ್ರೆ ದೇರಳಕಟ್ಟೆ ಇದರ ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ ಹಾಗೂ ಆಳ್ವಾಸ್ ಹೆಲ್ತ್‌ಸೆಂಟರ್ ಮೂಡುಬಿದಿರೆ ಇದರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಉರ್ಪೆಲ್ ಪಾದೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

 ಕುಂಭಕಂಠಿಣಿ ಸೇವಾ ಬಳಗ ಮಾರೂರು ಇದರ ಅಧ್ಯಕ್ಷ ಶಂಭು ಎನ್. ಶೆಟ್ಟಿ ದೀಪ ಬೆಳಗಿಸುವ ಮೂಲಕ ಶಿಬಿರಗಳನ್ನು ಉದ್ಘಾಟಿಸಿ ಶುಭ ಹಾರೈಸಿದರು.

 ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ.ಕೋಟ್ಯಾನ್ ಮಾರೂರು ಇವರು ಅಧ್ಯಕ್ಷತೆ ವಹಿಸಿದ್ದರು.

  ಪುರಸಭಾ ಕುಶಲ ಯಶೋಧರ್ ದೇವಾಡಿಗ, ಹೊಸ ಕನಸು ಸೇವಾ ಟ್ರಸ್ಟ್ (ರಿ.) ನೆತ್ತೋಡಿ ಇದರ ಅಧ್ಯಕ್ಷ *ಸಂಪತ್ ಸುವರ್ಣ,  ನಮೋ ಫ್ರೆಂಡ್ಸ್ ಕ್ಲಬ್ (ರಿ.) ನೆತ್ತೋಡಿ ಇದರ ಅಧ್ಯಕ್ಷ ಕಿರಣ್ ಸುವರ್ಣ,  ಶಾಲಾ ವ್ಯವಸ್ಥಾಪನಾ ಸಮಿತಿಯ  ಸದಸ್ಯ ಎನ್.ಕೆ .ಸಾಲ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಸರಸ್ವತಿ ನವೀನ್ ಶೆಟ್ಟಿ, ಹೊಸಂಗಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಹರಿಪ್ರಸಾದ್, ಶಾಲೆಯ ಮುಖ್ಯ ಶಿಕ್ಷಕಿ ಸುಮಾ,  ಆಳ್ವಾಸ್ ಆಸ್ಪತ್ರೆಯ ಹರೀಶ್ ಪೂಜಾರಿ , ಕೆಎಂಸಿ, ಯೆನಪೋಯ ದಂತ ಆಸ್ಪತ್ರೆಯ ವೈದ್ಯರುಗಳು ಉಪಸ್ಥಿತರಿದ್ದರು.


  ಸುನಿಲ್ ಶೆಟ್ಟಿ ಮಂಜದಡಿ ಕಾರ್ಯಕ್ರಮ ನಿರೂಪಿಸಿದರು.  300ಕ್ಕೂ ಹೆಚ್ಚಿನ ಜನರು* ಈ ಶಿಬಿರದ ಪ್ರಯೋಜನ ಪಡೆದುಕೊಂಡರು. 

47  ಜನರು ದಂತ ಚಿಕಿತ್ಸೆಯ ಪ್ರಯೋಜನ, 60 ಜನರಿಗೆ ಕನ್ನಡಕ ಹಾಗೂ 85 ಜನರಿಗೆ ಔಷಧಿ ವಿತರಿಸಲಾಯಿತು. ಹೆಚ್ಚಿನ ತಪಾಸಣೆಗಾಗಿ 15 ಜನರನ್ನು ಕೆಎಂಸಿ ಅತ್ತಾವರ ಆಸ್ಪತ್ರೆ ಇಲ್ಲಿಗೆ ತೆರಳಲು ತಿಳಿಸಲಾಯಿತು.  13 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆಗೆ ಶಿಫಾರಸು ಮಾಡಿ ಹಸಿರು ಕಾರ್ಡ್ ವಿತರಿಸಲಾಯಿತು.

ಸ್ವಯಂ ರಕ್ತದಾನ ಶಿಬಿರದಲ್ಲಿ 18 ಜನರು  ರಕ್ತದಾನ ಮಾಡಿದರು.

Post a Comment

0 Comments