ನಾಳೆ ಮಂಗಳೂರಿನ ಎರಡು ಬೃಹತ್ ಯೋಜನೆಗಳಿಗೆ ಗಡ್ಕರಿಯಿಂದ ಶಂಕುಸ್ಥಾಪನೆ:ಸಂಸದ ಕಟೀಲಿಗೆ ಆನೆಬಲ

ಜಾಹೀರಾತು/Advertisment
ಜಾಹೀರಾತು/Advertisment

 ನಾಳೆ ಮಂಗಳೂರಿನ ಎರಡು ಬೃಹತ್ ಯೋಜನೆಗಳಿಗೆ ಗಡ್ಕರಿಯಿಂದ ಶಂಕುಸ್ಥಾಪನೆ:ಸಂಸದ ಕಟೀಲಿಗೆ ಆನೆಬಲ

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ- ಧರ್ಮಸ್ಥಳ-ಪೆರಿಯಶಾಂತಿಯ ರಾಷ್ಟ್ರೀಯ ಹೆದ್ದಾರಿ 73ರ 28 ಕಿಲೋಮೀಟರ್ ರಸ್ತೆಗೆ 614 ಕೋಟಿ ರೂಪಾಯಿ ಹಾಗೂ ಚಾರ್ಮಾಡಿ ಘಾಟಿಯ 11 ಕಿಲೋಮೀಟರ್ ರಸ್ತೆಯ 344 ಕೋಟಿ ರೂಪಾಯಿ ವೆಚ್ಚದಲ್ಲಿ ದ್ವಿಪಥಗೊಳಿಸಲು ಇತ್ತೀಚೆಗೆ ಅನುದಾನ ಬಿಡುಗಡೆಗೊಂಡಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮ ನಾಳೆ ನಡೆಯಲಿದೆ.


ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಶಿವಮೊಗ್ಗಕ್ಕೆ ಆಗಮಿಸಲಿರುವ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರು ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರಡೂ ಬೃಹತ್ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ.


ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲುರವರ ಮನವಿಯ ಮೇರೆಗೆ ಈ ಎರಡು ರಸ್ತೆಗಳಿಗೆ ಅನುದಾನ ದೊರೆತಿದ್ದು ಶೀಘ್ರವಾಗಿ ಶಿಲಾನ್ಯಾಸ ದೊರೆಯುವಂತಾಗಿದ್ದು ಚುನಾವಣಾ ಸಂದರ್ಭದಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ.

Post a Comment

0 Comments