ಮೂಡುಬಿದಿರೆಯಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

* ಕನ್ನಡ ಸಾಯುವ ಭಾಷೆಯಲ್ಲ  ಆಚಂದ್ರಾರ್ಕವಾಗಿ ಉಳಿಯುವ ಭಾಷೆ : ಶ್ರೀಪತಿ ಮಂಜನಬೈಲು


ಮೂಡುಬಿದಿರೆ: ಜಗತ್ತಿನ ಆರು ಸಾವಿರ ಭಾಷೆಗಳಲ್ಲಿ ಕನ್ನಡ ಮೊದಲ ಮೂವತ್ತು ಭಾಷೆಗಳಲ್ಲಿ ಇವತ್ತಿಗೂ ಒಂದಾಗಿದೆ. ಮತ್ತೆ ಅದು ಜಂಜಡದಿಂದ ಹೊರ ಬರುತ್ತದೆ. ಮತ್ತೇನೋ ದೊರಕುತ್ತದೆ. ತನ್ನುದರದಲ್ಲೇ ಮತ್ತೆ ಪುನರತ್ಥಾನ ಹೊಮ್ಮಿಸುತ್ತದೆ ಮತ್ತೆ ನೆಲ ಸಂಸ್ಕೃತಿಯ ನಾವೀನ್ಯತೆ ಹೊಂದಿ ಕನ್ನಡ ಭಾಷೆ ಉಳಿಯುತ್ತದೆ ಅದು ಸಾಯುವ ಭಾಷೆ ಅಲ್ಲ. ಆಚಂದ್ರಾರ್ಕವಾಗಿ ಉಳಿಯುವ ಭಾಷೆ ಎಂದು ಖ್ಯಾತ ರಂಗಕರ್ಮಿ ಹಾಗೂ ಕಿರುತೆರೆ ಮತ್ತು ಚಲನಚಿತ್ರ ನಟ ಶ್ರೀಪತಿ ಮಂಜನಬೈಲು ಹೇಳಿದರು. 

   ಅವರು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಮಂಗಳವಾರ ನಡೆದ  ಮೂಡುಬಿದಿರೆ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

   


ಆದರೆ ಇಂದು ಒಟ್ಟಾಗಿ ಬದಲಾವಣೆಯಲ್ಲಿ ಹೆಚ್ಚಾಗಿ ಇಂಗ್ಲೀಷ್ ಓದಿದವರ ಕಾರ್ಯ ಹೆಚ್ಚಿದೆ. ಆದ್ದರಿಂದ ಕನ್ನಡದ ಹಲವು ಶಬ್ಧಗಳು ಕಾಲ ಕಾಲಕ್ಕೆ  ಹಿಂದಕ್ಕೆ ತಳ್ಳಿಸಿಕೊಂಡು ಅಲ್ಲಿ ಇಂಗ್ಲೀಷಿನ ಶಬ್ಧಗಳು ಆಕ್ರಮಿಸಿಕೊಂಡದ್ದೂ ಇದೆ. ಇದು ಮನೆಯ ಪ್ರವೇಶ ಕೋಣೆ ಅಷ್ಟೇ ಅಲ್ಲ ಅಡುಗೆ ಮನೆಗೂ ದಾಳಿಯಿಟ್ಟಿದೆ. ಕಾರು, ಬುಕ್ಕು, ಪೆನ್ನು, ಇಂಕು, ಪೇಪರು, ಹಾಲ್ ಇತ್ಯಾದಿ ಪದಗಳು ತೊಟ್ಟಿ ಮನೆಯಲ್ಲಿದ್ದವು. ಈಗ ಕನ್ನಡದ ಹಲವಾರು ಅಡುಗೆ ಮನೆ ಸಾಮಾಗ್ರಿಗಳ, ಹಣ್ಣು ಹಂಪಲುಗಳ ದಿನಸಿ ಸಾಮಾನುಗಳಿಗಿದ್ದ ಕನ್ನಡದ ಹೆಸರುಗಳನ್ನು ಇಂಗ್ಲೀಷ್ ಶಬ್ಧಗಳು ಆಕ್ರಮಿಸಿಕೊಂಡಿದೆ. ಚಿಲ್ಲೀಸ್, ಕ್ಯಾವೆಂಡಿಸ್, ಪ್ಲವರ್, ಕುಕ್ಕಂಬರ್, ಗವ್ವಾ, ಗ್ರೇಪ್ ಹೀಗೆ ಅನೇಕ ಶಬ್ಧಗಳು. ಇವು ಅನಿವಾರ್ಯವೇ ಅಲ್ಲ ಆದರೂ ಬದಲಾಗುತ್ತಿದೆ. ಕಾರಣ  "ಮೀಸೆ ಹೊಕ್ಕಿಸಲು ಬಿಟ್ಟರೆ ದೇಹವನ್ನೇ ಒಳ ಹೊಕ್ಕಿಸಿ ವ್ಯಾಪಿಸುವ ಇಂಗ್ಲೀಷ್ ನಂತ ಭಾಷೆ  ಬೀಗುತ್ತಾ ನಿಂತಿದೆ. ಇಂಗ್ಲೀಷ್ ಮಾತನಾಡಿದರೆ ಅದು ಗೌರವ ಎಂಬ ಮನಸ್ಸು ಬೆಳೆದುಬಿಟ್ಟಿದೆ. ಇದರಿಂದ ಹೊರ ಬರಬೇಕೆಂದರೆ ನಾವು ನಾವಾಗಬೇಕು. ನಾವು ಜನಾಂದೋಲನದಂತೆ ದುಡಿಯಬೇಕು.

 ಒಬ್ಬ ಒಳ್ಳೆಯ ಟೀಚರ್ ಉತ್ತಮ ನಟನೂ ಆಗಿರಬೇಕು ಆಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ  ಭಾಷಾಭಿಮಾನವನ್ನು ಅಚ್ಚಳಿಯದೆ ಉಳಿಯುವಂತೆ ಮಾಡಬಹುದು ಎಂದ ಅವರು ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಮನಸ್ಸಿನ ಮತ್ತು ಹೃದಯದ ಭಾಷೆಯಾಗಿರಬೇಕು. ಮಾತೃ ಭಾಷೆಯನ್ನು ಸರಿಯಾಗಿ ಕಲಿತರೆ ಇತರ ಭಾಷೆಯನ್ನು ಸರಿಯಾಗಿ ಅರಿಯಲು ಸಾಧ್ಯವಾಗುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಥಮ ತಾಲೂಕು ಸಾಹಿತ್ಯ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿ  ಅನುಗುಣವಾಗಿ ಬೇಕಾದಂತೆ ಕನ್ನಡ ಮಾಧ್ಯಮ ಶಾಲೆಗಳು ಗಟ್ಟಿಯಾಗಿದ್ದರೆ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತದೆ. ಜಪಾನ್, ಚೈನಾ, ರಷ್ಯಾ ಹಾಗೂ ಜರ್ಮನ್ ಇಲ್ಲಿನ ಶಾಲೆಗಳಲ್ಲಿ ಇಂಗ್ಲೀಷ್ ಪ್ರವಾಹ ಹೆಚ್ಚಾದಾಗಲೂ ಅವರು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದ್ದರಿಂದ ಅವರ ಮಾತೃಭಾಷೆ ಗಟ್ಟಿಯಾಗಿ ಉಳಿದಿಕೊಂಡಿದೆ. ಆದರೆ ನಮ್ಮ ಸರಕಾರಿ ಶಾಲೆಗಳಿಗೆ ಸರಿಯಾದ ಕೊಠಡಿಗಳನ್ನು ಮತ್ತು ಶಿಕ್ಷಣವನ್ನು ನೀಡಲು ಬೇಕಾದ ಟೀಚರ್ಸನ್ನು ಸರಕಾರಕ್ಕೆ ಯೋಗ್ಯಕ್ಕೆ ಇಲ್ಲದಂತ್ತಾಗಿದೆ ಇದರಿಂದಾಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಫಲಿತಾಂಶಗಳು ಕಡಿಮೆಯಾಗುತ್ತಿರುವುದು ಎಂದು ಬೇಸರ ವ್ಯಕ್ತಪಡಿಸಿದರು.


ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶುಭಾಶಂಸನೆಗೈಯ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್  ಆಶಯ ನುಡಿಗಳನ್ನಾಡಿದರು.

    ಮೂಡುಬಿದಿರೆ ತಹಶೀಲ್ದಾರ್ ಮುಕುಲ್ ಜೈನ್, ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಬೆದ್ರ ತುಳುಕೂಟದ ಅಧ್ಯಕ್ಷ ಧನಕೀರ್ತಿ ಬಲಿಪ, ಮೂಡುಬಿದಿರೆ ಜೈನ್ ಮಿಲನ್ ನ ಅಧ್ಯಕ್ಷ ದಿನೇಶ್ ಆನಡ್ಕ, ಮೂಡುಬಿದಿರೆ  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಿಥುನ್ ಉಡುಪ, ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ  ಗೌರವ ಕೋಶಾಧ್ಯಕ್ಷ ಅಂಡಾರು ಗುಣಪಾಲ ಹೆಗ್ಡೆ, ಕಾರ್ಯದರ್ಶಿ ಸದಾನಂದ ನಾರಾವಿ, ಹೋಬಳಿ ಅಧ್ಯಕ್ಷ ರಾಮಕೃಷ್ಣ ಶಿರೂರು, ಜಯಶ್ರೀ ಅಮರನಾಥ ಶೆಟ್ಟಿ, ಕೆಂದ್ರೀಯ ಕಾರ್ಯಕಾರಿ ಸಮಿತಿಯ ಡಾ.ಮಾಧವ ಎಂ.ಕೆ, ಗೌರವ ಕಾರ್ಯದರ್ಶಿ ವಿನಯ ಆಚಾರ್ಯ ಉಪಸ್ಥಿತರಿದ್ದರು.

  

   ಮೂಡುಬಿದಿರೆ ತಾಲೂಕು ಘಟಕದ ಕ.ಸಾ.ಪ. ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಎಲ್.ಜೆ.ಫೆರ್ನಾಂಡಿಸ್ ವಂದಿಸಿದರು. 

ಇದಕ್ಕೂ ಮೊದಲು ಉದ್ಯಮಿ ಶ್ರೀಪತಿ ಭಟ್ ರಾಷ್ಟ್ರ ಧ್ವಜವನ್ನು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜವನ್ನು ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಕನ್ನಡ ಧ್ವಜವನ್ನು ಡಾ.ಎಂ.ಮೋಹನ ಆಳ್ವ ಆರೋಹಣಗೈದರು.

Post a Comment

0 Comments