ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಕಲಾವಿದರ ಸಂಘದಿಂದ ಸಾಧಕರಿಗೆ ಸನ್ಮಾನ, ಆರ್ಥಿಕ ನೆರವು
ಮೂಡುಬಿದಿರೆ: ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಕಲಾವಿದರ ಸಂಘ(ರಿ) ಮೂಡುಬಿದಿರೆ ಇದರ 11ನೇ ವರ್ಷದ ವಾರ್ಷಿಕ ಮಹಾಸಭೆಯು ಸಮಾಜ ಮಂದಿರದಲ್ಲಿ ಮಂಗಳವಾರ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಂಘಗಳು ಸದೃಢವಾಗಿ ಬೆಳೆಯಬೇಕು. ಯುವ ಪೀಳಿಗೆಯನ್ನು ಬಳಸಿಕೊಂಡು ಸಾಂಪ್ರದಾಯಿಕ ಕಲೆಗಳಿಗೆ ಆಧುನಿಕ ಸ್ಪರ್ಶ ನೀಡಿ ಯಾವ ರೀತಿಯಾಗಿ ಬೆಳೆಸಬೇಕೆಂಬುದರ ಅರಿತುಕೊಳ್ಳಬೇಕಾಗಿದೆ ಎಂದ ಅವರು ಸಂಘದ ನಿವೇಶನಕ್ಕೆ ಈ ಬಾರಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ನೋಟರಿ ಶ್ವೇತಾ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಸನ್ಮಾನ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಸ್ಯಾಕ್ಸೋಫೋನ್ ವಾದಕ ಎ.ಸುರೇಶ್ ಪೂಜಾರಿ ಮತ್ತು ನೋಟರಿ ಶ್ವೇತಾ ಜೈನ್ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.
ಆರ್ಥಿಕ ನೆರವು : ಅನಾರೋಗ್ಯ ಹೊಂದಿರುವ ಸಂಘದ ಸದಸ್ಯರಾದ ಹಿರಿಯ ಕಲಾವಿದರಾದ ಡೊಂಬಯ್ಯ ಶೇರಿಗಾರ್ ಎಡಪದವು, ತಿಮ್ಮಪ್ಪ ಪೂಜಾರಿ, ಜಯ ಪೂಜಾರಿ ತೋಡಾರು ಮತ್ತು ಪ್ರಕಾಶ್ ದೇವಾಡಿಗ ಅವರಿಗೆ ತಲಾ 10,000ದಂತೆ ಆರ್ಥಿಕ ನೆರವು ನೀಡಲಾಯಿತು.
ಪುರಸಭೆಯ ಸ್ಥಾಯಿ ಸಮಿತಿಯ ನಿರ್ಗಮನ ಅಧ್ಯಕ್ಷ ನಾಗರಾಜ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಸುರೇಶ್ ದೇವಾಡಿಗ, ಗೌರವಾಧ್ಯಕ್ಷ ಕೇಶವ ಶೆಟ್ಟಿಗಾರ್, ಕಾರ್ಯದರ್ಶಿ ನಾಗೇಶ್ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಯೆನೆಪೋಯ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಶ್ರೀನಿವಾಸ ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ಲಕ್ಷ್ಮೀ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.
0 Comments