ತುಳುಕೂಟದ ಮಾಸಿಕ ಸಭೆ - ನಾಗಾರಾಧನೆಯ ಬಗ್ಗೆ ಉಪನ್ಯಾಸ

ಜಾಹೀರಾತು/Advertisment
ಜಾಹೀರಾತು/Advertisment

 ತುಳುಕೂಟದ ಮಾಸಿಕ ಸಭೆ - ನಾಗಾರಾಧನೆಯ ಬಗ್ಗೆ ಉಪನ್ಯಾಸ



ಮೂಡುಬಿದಿರೆ: ತುಳುಕೂಟ (ರಿ.) ಬೆದ್ರ ಇದರ ಮಾಸಿಕ ಸಭೆ ಮತ್ತು ನಾಗಾರಾಧನೆಯ ಕುರಿತು ವಿಶೇಷ ಉಪನ್ಯಾಸ ಕನ್ನಡಭವನದ ಕಛೇರಿಯಲ್ಲಿ ನಡೆಯಿತು.

 

  ಜೋತಿಷ್ಯ, ವಾಸ್ತುಶಾಸ್ತçದಲ್ಲಿ ತಜ್ಞರಾಗಿರುವ ಪೊಳಲಿಯ  ರಾಜಶೇಖರ ರಾವ್ ಎನ್. ಅವ


ರು ನಾಗಾರಾಧನೆಯ ಬಗ್ಗೆ ಉಪನ್ಯಾಸ ನೀಡುತ್ತಾ  ನಾಗಲೋಕ ಎನ್ನುವುದು ಭೂಮಿಯ ಗರ್ಭವಾಗಿದ್ದು ಅದರಿಂದ ಉಂಟಾಗುವ ತೊಂದರೆಗಳಿಗೆ ವಾಹಕವಾಗಿ ಸರ್ಪವನ್ನು ಕಾಣುತ್ತೇವೆ. ನಾಗ ಎಂದರೆ ಸರ್ಪ ಎನ್ನುವ ಹೆಸರಿರುವುದಾದರೂ ನಾಗಾರಾಧನೆಯಲ್ಲಿ ಬರುವ ನಾಗ ಎಂದರೆ ಸರ್ಪವಲ್ಲ. ನಾಗರ ಹಾವು ತೊಂದರೆಗಳನ್ನು ಮನಗಾಣಿಸುವ ಮಾಧ್ಯಮವಾಗಿ ಮಾತ್ರ ಮುಖ್ಯವಾಗುವುದರಿಂದಲೇ ಅದು ಆರಾಧನೆಗೆ ಯೋಗ್ಯವಾಗಿದೆ  ಎಂದ ಅವರು  ನಾಗಾರಾಧನೆಯ ನಂಬಿಕೆ ಬೆಳೆದು ಬಂದ ಹಿನ್ನೆಲೆಯನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಿದರು.

 ನಂತರ ಸಂವಾದದಲ್ಲಿ ಪಾಲ್ಗೊಂಡು ಸದಸ್ಯರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳನ್ನೂ ನೀಡಿದರು.

ತುಳುಕೂಟದ ಅಧ್ಯಕ್ಷ ಧನಕೀರ್ತಿ ಬಲಿಪ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಥಾಪಕಾಧ್ಯಕ್ಷ ಚಂದ್ರಹಾಸ ದೇವಾಡಿಗರು ಸ್ವಾಗತಿಸಿದರು. ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Post a Comment

0 Comments