ಮೂಡುಬಿದಿರೆ ಕೋ ಅಪರೇಟಿವ್ ಸರ್ವೀಸ್ ಬ್ಯಾಂಕ್ ಚುನಾವಣೆ: 9 ಮಂದಿ ನಿರ್ದೇಶಕರು ಆಯ್ಕೆ
ಮೂಡುಬಿದಿರೆ ಕೊ ಅಪರೇಟಿವ್ ಸರ್ವಿಸ್ ಬ್ಯಾಂಕ್ ಗೆ ಭಾನುವಾರ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಸಹಿತ ಒಂಭತ್ತು ಮಂದಿ ಆಯ್ಕೆಯಾಗಿದ್ದು, ನಾಲ್ಕು ಮಂದಿ ಈ ಹಿಂದೆಯೇ ಅವಿರೋಧ ಆಯ್ಕೆಯಾಗಿರುವುದರಿಂದ ಒಟ್ಟು ಹದಿಮೂರು ಮಂದಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಅಶೋಕ ಕಾಮತ್,ಬಾಹುಬಲಿ ಪ್ರಸಾದ್, ಮನೋಜ್ ಕುಮಾರ್, ಜಯರಾಮ ಕೋಟ್ಯಾನ್, ಜ್ಞಾನೇಶ್ವರ ಪೈ, ಕೆ.ಅಭಯಚಂದ್ರ, ಸಿ.ಎಚ್. ಅಬ್ದುಲ್ ಗಫೂರ್, ಅನಿತಾ ಪಿ. ಶೆಟ್ಟಿ ಹಾಗೂ ಪ್ರೇಮಾ ಸಾಲ್ಯಾನ್ ನಿನ್ನೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಜಾರ್ಜ್ ಮೊನಿಸ್, ದಯಾನಂದ ನಾಯ್ಕ್, ಗಣೇಶ್ ನಾಯ್ಕ್ ಹಾಗೂ ಪದ್ಮನಾಭ ಅವರು ಅವಿರೋಧ ಆಯ್ಕೆಯಾಗಿದ್ದರು.
ಮಾಜಿ ಸಚಿವ ಕೆ. ಅಭಯಚಂದ್ರ ಅವರು ಮೊದಲ ಬಾರಿಗೆ ಸಹಕಾರಿ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದಾರೆ.
0 Comments