ಸರಕಾರಿ ಶಾಲೆಯ ಆವರಣದಲ್ಲಿರುವ ಬೆಲೆಬಾಳುವ ಮರಗಳನ್ನು ಉರುಳಿಸಿದವರಾರು...?

ಜಾಹೀರಾತು/Advertisment
ಜಾಹೀರಾತು/Advertisment

 ಸರಕಾರಿ ಶಾಲೆಯ ಆವರಣದಲ್ಲಿರುವ ಬೆಲೆಬಾಳುವ ಮರಗಳನ್ನು ಉರುಳಿಸಿದವರಾರು...?





 ಮೂಡುಬಿದಿರೆ: ಇಲ್ಲಿನ ಜ್ಯೋತಿನಗರ ಸರಕಾರಿ ಹಿ.ಪ್ರಾ.ಶಾಲಾ  ಆವರಣದಲ್ಲಿ ಬೆಳೆಸಿದ್ದ ಬೆಲೆ ಬಾಳುವ ಸುಮಾರು 65 ಮರ ಗಿಡಗಳು ಬುಡ ಸಹಿತ ಧರೆಗುರುಳಿದ್ದು ಇದನ್ನು ಉರುಳಿಸಿದವರಾರೆಂದು ಗಿಡ ನೆಟ್ಟವರಲ್ಲಿ ಪ್ರಶ್ನೆಯೊಂದು ಮೂಡಿದೆ.


  

ಶಿಕ್ಷಕ ಪ್ರಸನ್ನ ಶೆಣೈ ಅವರು 2013 ರಿಂದ 2015ರ ವರೆಗೆ ಈ ಶಾಲೆಯಲ್ಲಿ  ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದು, 2014ರಲ್ಲಿ ಅರಣ್ಯ ಇಲಾಖೆಯಿಂದ ಸುಮಾರು 65  ತೇಗ ಮತ್ತು ಇತರ ಗಿಡಗಳಿಗೆ  ಮೌಲ್ಯವನ್ನು ನೀಡಿ ವಿದ್ಯಾರ್ಥಿಗಳು ಮತ್ತು ಆಗಿನ ಶಿಕ್ಷಕರ ಸಹಕಾರದಿಂದ ಶಾಲಾ ಆವರಣದ ಒಳಗೆ ನೆಡಲಾಗಿತ್ತು. 

ಸುಮಾರು 55 ಗಿಡಗಳು ಉತ್ತಮವಾಗಿ ಬೆಳೆದು ತೇಗದ ಗಿಡಗಳು 10 ರಿಂದ 12 ಅಡಿಯಷ್ಟು ಬೆಳೆದಿತ್ತು. ಗಿಡನೆಟ್ಟು ನೀರು ಹಾಕಿ ಪೋಸಿಸಿರುವ ಶಿಕ್ಷಕ ಪ್ರಸನ್ನ ಶೆಣೈ ಅವರು ಆ ಶಾಲೆಯ ಬಳಿಯ ಮಾರ್ಗದಲ್ಲಿ ಹೋಗುತ್ತಿದ್ದಾಗ  ಎಲ್ಲಾ ಗಿಡಗಳನ್ನು ಬುಡ ಸಹಿತ ತೆಗೆದುಹಾಕಿ ಶಾಲಾ ಆವರಣವನ್ನು ಸಮತಟ್ಟು ಮಾಡಿರುವುದು ಅವರ ಗಮನಕ್ಕೆ ಬಂದಿದೆ.  

ತಾನು ಗಿಡಗಳನ್ನು ತನ್ನ ಮಕ್ಕಳಂತೆ ಪೋಷಿಸಿದ್ದೇನೆ. ಕಾನೂನು ಬಾಹಿರವಾಗಿ ಮರಗಳನ್ನು ಉರುಳಿಸಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಶೆಣೈ ಅವರು ಈ ಶಾಲೆಯಲ್ಲಿ ಪುರಸಭಾ ಸದಸ್ಯರೋರ್ವರು ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದು ಇವರ ಗಮನಕ್ಕೆ ಬಂದಿಲ್ಲವೇ, ಶಿಕ್ಷಣ ಸಂಸ್ಥೆ ಇದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. 


  ಶಿಕ್ಷಕರಾಗಿ ಮನೆಗೊಂದು ಮರ ಊರಿಗೊಂದು ವನ, ಕಾಡು ಬೆಳೆಸಿ ನಾಡು ಉಳಿಸಿ ಎಂದು ಯಾವ ಪುರುಷಾರ್ಥಕ್ಕೆ ಶಿಕ್ಷಕರು ಹೇಳುವುದು. ಇನ್ನು ಹತ್ತು  ವರ್ಷಗಳಲ್ಲಿ ಆ ಪ್ರತಿಯೊಂದು ಗಿಡದ ಮೌಲ್ಯ ಸುಮಾರು ಒಂದು ಲಕ್ಷ ಆಗುತ್ತಿತ್ತು. ಈಗ ಶಾಲೆಗೆ ಆಗಿರುವ ನಷ್ಟಕ್ಕೆ ಹೊಣೆ ಹೊರುವವರು ಯಾರೆಂದು ಈ ಗಿಡಗಳ

ಬುಡ ಸಹಿತ ಕಿತ್ತು ಹಾಕಿದವರು ಇದಕ್ಕೆ ಉತ್ತರಿಸಬೇಕಾಗಿದೆ.

Post a Comment

0 Comments