ಎಂ.ಸಿ.ಎಸ್ ಬ್ಯಾಂಕಿಗೆ ಪುತ್ತಿಗೆ ಸುಗುಣೇಂದ್ರ ಶ್ರೀ ಭೇಟಿ
ಮೂಡುಬಿದಿರೆ : ವ್ಯಕ್ತಿಗೆ ಆಯಸ್ಸು ಹೆಚ್ಚಿದಷ್ಟು ದುರ್ಬಲನಾಗುತ್ತಾನೆ ಆದರೆ ಸಂಸ್ಥೆ ಮತ್ತಷ್ಟು ಬಲಿಷ್ಠವಾಗುತ್ತದೆ. ಆರ್ಥಿಕ ಸಂಸ್ಥೆಗಳು ಬಲಿಷ್ಠವಾಗಲು ಗ್ರಾಹಕರ ವಿಶ್ವಾಸರ್ಹತೆಯು ಮುಖ್ಯ ಎಂದು ಉಡುಪಿ ಪುತ್ತಿಗೆ ಮಠದಲ್ಲಿ ನಾಲ್ಕನೇ ಬಾರಿಗೆ ಪರ್ಯಾಯ ಪೀಠವನ್ನು ಏರಲಿರುವ ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರು ಹೇಳಿದರು.
ಅವರು ಗುರುವಾರ ಇಲ್ಲಿನ ಎಂ.ಸಿ.ಎಸ್ ಬ್ಯಾಂಕಿಗೆ ಭೇಟಿ ನೀಡಿ ಪರ್ಯಾಯಕ್ಕೆ ಆಮಂತ್ರಿಸಿ ಆಶೀರ್ವಚನ ನೀಡಿದರು.
ತಮ್ಮ ಪರ್ಯಾಯದ ಅವಯಲ್ಲಿ ಕೋಟಿಗೀತಾಯಜ್ಞ ಯೋಜನೆ, ಪಾರ್ಥ ಸಾರಥಿ ಸುವರ್ಣರಥ ಹಾಗೂ ಅಂತರಾಷ್ಟ್ರೀಯ ಗೀತಾ ಸಮ್ಮೇಳನವನ್ನು ಆಯೋಜಿಸುವ ಯೋಜನೆ ರೂಪಿಸಿದ್ದು ಇದಕ್ಕೆ ಗ್ರಾಹಕರು ಸಹಕಾರ ನೀಡಬೇಕು ಎಂದರು.
ಸುಗುಣೇಂದ್ರ ಶ್ರೀಗಳ ಶಿಷ್ಯ ಶ್ರೀ ಸುಶೀಂದ್ರ ತೀರ್ಥ ಶ್ರೀ ಪಾದರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ವತಿಯಿಂದ ಅಧ್ಯಕ್ಷ ಬಾಹುಬಲಿ ಪ್ರಸಾದ್ ನಿಧಿ ಸಮರ್ಪಿಸಿದರು. ಬ್ಯಾಂಕಿನ ವಿಶೇಷ ಕರ್ತವ್ಯಾಕಾರಿ ಚಂದ್ರಶೇಖರ ಎಂ. ಸ್ವಾಮೀಜಿದ್ವಯರನ್ನು ಗೌರವಿಸಿದರು. ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿಗಳು, ಗಣ್ಯರು ಉಪಸ್ಥಿತರಿದ್ದರು.
0 Comments