ಮಂಗಳೂರು ಸೇರಿದಂತೆ ಯಾವುದೇ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಚರ್ಚೆ ಆಗಿಲ್ಲ:ಮಾಧ್ಯಮ ವರದಿ ಊಹಾಪೋಹ ಅಷ್ಟೇ: ರಾಮದಾಸ್ ಬಂಟ್ವಾಳ ಸ್ಪಷ್ಟನೆ
ಮಾಧ್ಯಮಗಳಲ್ಲಿ ರಾಜ್ಯದ ಹಾಲಿ ಸಂಸದರುಗಳಿಗೆ ವಿರೋಧವಿದೆ ಎಂದು ಬರುತ್ತಿರುವ ಸುದ್ಧಿ ಸತ್ಯಕ್ಕೆ ಸಂಪೂರ್ಣ ದೂರವಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಹೇಳಿದ್ದಾರೆ.
ಮಂಗಳೂರು ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ರಿಗೆ ಭಾರೀ ವಿರೋಧ ಎಂಬ ಸುದ್ಧಿ ಸಂಪೂರ್ಣ ಕಪೋಲ ಕಲ್ಪಿತ ಸುಳ್ಳು ಇದು ಕೇವಲ ಆಲೋಚನೆಗಳ ಸುದ್ಧಿ ಎಂದು ಅವರು ಹೇಳಿದರು.
ಬೆಂಗಳೂರಿನ ಯಲಹಂಕದ ರಮಡಾ ರೆಸಾರ್ಟ್ನಲ್ಲಿ ನಿನ್ನೆ ಮತ್ತು ಇಂದು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಚುನಾವಣಾ ಸಿದ್ದತಾ ಸಭೆ
ಶ್ರೀ ಬಿ.ಯಸ್. ಯಡಿಯೂರಪ್ಪ ಮತ್ತಿತರ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆದಿದೆ. ಈ ಸಭೆಯಲ್ಲಿ ಎಲ್ಲಾ 28 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಮೋದಿಜಿಯವರಿಗೆ ಅರ್ಪಿಸಬೇಕೆನ್ನುವ ನಿರ್ಣಯ ಕೈಗೊಳ್ಳಲಾಯಿತು. ಮಂಗಳೂರು ಮತ್ತು ಶಿವಮೊಗ್ಗ ವಿಭಾಗದ ಸಭೆಯಲ್ಲಿ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ನ ಹಾಲಿ ಮತ್ತು ಮಾಜಿ ಸದಸ್ಯರು ಪಕ್ಷದ ಜಿಲ್ಲೆಯ ಮತ್ತು ರಾಜ್ಯದ ಪದಾಧಿಕಾರಿಗಳು ನಾವೆಲ್ಲರೂ ಭಾಗವಹಿಸಿದ್ದೇವೆ. ಸಭೆಯಲ್ಲಿ ಚುನಾವಣೆಯ ಗೆಲುವಿನ ಕಾರ್ಯತಂತ್ರ ಹಾಗೂ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಚರ್ಚೆಯಾಯಿತು. ಸಭೆಯಲ್ಲಿ ಭಾಗವಹಿಸಿದ ನಾಯಕರು ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು. ಮಾನ್ಯ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರರವರು ತಮ್ಮ ಭಾಷಣದಲ್ಲಿ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದರು. ಇದನ್ನು ಹೊರತುಪಡಿಸಿ ಮಂಗಳೂರು ಸಂಸದರ ಬಗ್ಗೆಯಾಗಲಿ ರಾಜ್ಯದ ಇತರ ಸಂಸದರ ಬಗ್ಗೆಯಾಗಲಿ ಯಾವುದೇ ವೈಯುಕ್ತಿಕ ವಿರೋಧಗಳ ಬಗ್ಗೆ ಈ ಸಭೆಯಲ್ಲಿ ಪ್ರಸ್ತಾವವೇ ಆಗಿಲ್ಲ ಇದೆಲ್ಲಾ ಕಾಂಗ್ರೇಸ್ ನ ವ್ಯವಸ್ತಿತ ಕುತಂತ್ರದ ಭಾಗವಾಗಿರುವ ಬಲವಾದ ಗುಮಾನಿಯಿದೆ. ಪುತ್ತೂರು ಭಾಗದಿಂದ ತೀವ್ರ ವಿರೋಧ ಎಂಬ ಸುದ್ಧಿ ಹರಡಲಾಯಿತು. ಅಸಲಿಗೆ ಪುತ್ತೂರಿನಿಂದ ಈ ಸಭೆಯಲ್ಲಿ ಭಾಗವಹಿಸಿದ್ದು ಮಾಜಿ ಶಾಸಕ ಶ್ರೀ ಸಂಜೀವ ಮಠಂದೂರು ಮಾತ್ರ. ಅವರು ಸಂಸದರ ಬಗ್ಗೆ ಯಾವುದೇ ವಿರೋಧವನ್ನು ವ್ಯಕ್ತ ಪಡಿಸಲೇ ಇಲ್ಲ. ಇದೆಲ್ಲಾ ಮೋದಿಜಿಯವರ ವರ್ಚಸ್ಸಿನಿಂದ ಕಂಗೆಟ್ಟಿರುವ ಕಾಂಗ್ರೇಸ್ ನ ನಾಯಕರು ಶತಾಯಗತಾಯ ಬಿಜೆಪಿಯನ್ನು ಸೋಲಿಸಲೇಬೇಕೆಂದು ಮಾಡಿದ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ. ಇದು ಊಹಾಪೋಹ ವಾಹಿನಿಯ ಕಪೋಲಕಲ್ಪಿತ ನ್ಯೂಸ್. ರಾಜ್ಯದ ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಎಳ್ಳಷ್ಟೂ ಚರ್ಚೆಯಾಗಿಲ್ಲ. ಕೇವಲ ಸಂಘಟನಾತ್ಮಕವಾದ ಚರ್ಚೆಗಳು ಮಾತ್ರವೇ ನಡೆದಿವೆ. ಮಾಧ್ಯಮಗಳಿಗೆ ಕೂಡ ಈ ಸಭೆಗೆ ಪ್ರವೇಶಾವಕಾಶ ಇರಲಿಲ್ಲ. ಮಂಗಳೂರು ಉಡುಪಿ ಮಾತ್ರವಲ್ಲ, ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಪರ ವಿರೋಧದ ಚರ್ಚೆಯೇ ನಡೆದಿಲ್ಲ.
ರಾಮದಾಸ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿಗಳು, ಬಿಜೆಪಿ ದ.ಕ. ಜಿಲ್ಲೆ
0 Comments