ರಾಷ್ಟ್ರೀಯ ಫಲಿತಾಂಶಕ್ಕಿಂತ ಸತತ ಅಧಿಕ ಫಲಿತಾಂಶ ದಾಖಲಿಸಿದ ಆಳ್ವಾಸ್ ಕಾಲೇಜು

ಜಾಹೀರಾತು/Advertisment
ಜಾಹೀರಾತು/Advertisment

 ರಾಷ್ಟ್ರೀಯ ಫಲಿತಾಂಶಕ್ಕಿಂತ ಸತತ ಅಧಿಕ ಫಲಿತಾಂಶ ದಾಖಲಿಸಿದ ಆಳ್ವಾಸ್ ಕಾಲೇಜು

ಸಿ.ಎ. ಅಂತಿಮ ಪರೀಕ್ಷೆ: ೧೪ ಆಳ್ವಾಸ್ ವಿದ್ಯಾರ್ಥಿಗಳು ಉತ್ತೀರ್ಣ



ಮೂಡುಬಿದಿರೆ: ೨೦೨೩ರ ನವೆಂಬರ್‌ನಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ೧೪ ಹಿರಿಯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ ೯ ವಿದ್ಯಾರ್ಥಿಗಳು ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪದವಿ ಹಾಗೂ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ನೌಫಲ್, ವಾಣಿಶ್ರೀ, ಧಾಮಿನಿ, ಮೇಘಾ ಆರ್. ಶೆಟ್ಟಿ, ತೇಜಸ್ ಆಚಾರ್ಯ, ಕ್ಲಾರಿಸನ್, ಪ್ರಸಾದ ಭಂಡೇಕರ್, ದರ್ಶನ್ ಜಿ.ಎಚ್, ರಾಷ್ಟ್ರೀತ್ ಜಿ.ಸಿ, ಅವಿನಾಶ್, ಅಂಕಿತಾ ಕಲ್ಲಪ್ಪ, ಸೂಕ್ಷ್ಮ ಎಸ್ ಆಚಾರ್ಯ, ವಿನಾಯಕ್, ಅಭಿಷೇಕ್ ಚೋಟಿ  ಉತ್ತಮ  ಫಲಿತಾಂಶದೊAದಿಗೆ ಉತ್ತೀರ್ಣರಾಗಿದ್ದಾರೆ. 



ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆ ೨೦೨೩:

೨೦೨೩ ನವೆಂಬರ್‌ನಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯಟ್  ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ ೯.೭೩ ಶೇಕಡಾ ಫಲಿತಾಂಶ À ಬಂದಿದ್ದರೆ,  ಆಳ್ವಾಸ್ ಪದವಿ ಕಾಲೇಜು ವಿದ್ಯಾರ್ಥಿಗಳು ಗ್ರೂಪ್ -೦೧ ಮತ್ತು ಗ್ರೂಪ್-೦೨ನಲ್ಲಿ ಶೇಕಡಾ ೨೧.೪೩ ಫಲಿತಾಂಶ ದಾಖಲಿಸಿದ್ದಾರೆ. 

ಗ್ರೂಪ್ ೦೧ ವಿಭಾಗದಲ್ಲಿ ರಾಷ್ಟ್ರೀಯ ಫಲಿತಾಂಶ ಶೇಕಡಾ ೧೬.೭೮ ದಾಖಲಾಗಿದ್ದರೆ, ಆಳ್ವಾಸ್ ವಿದ್ಯಾರ್ಥಿಗಳು  ಶೇಕಡಾ ೬೦ ಫಲಿತಾಂಶ ಪಡೆದಿದ್ದಾರೆ. ಗ್ರೂಪ್-೦೨ ವಿಭಾಗದಲ್ಲಿ ರಾಷ್ಟç ಮಟ್ಟದಲ್ಲಿ ಶೇಕಡಾ ೧೯.೧೮ ದಾಖಲಾಗಿದ್ದರೆ, ಆಳ್ವಾಸ್ ವಿದ್ಯಾರ್ಥಿಗಳು  ಶೇಕಡಾ ೬೬.೬೬ ಗಳಿಸಿದ್ದಾರೆ. 


ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮತ್ತು ಪ್ರಾಂಶುಪಾಲ ಡಾ.ಕುರಿಯನ್, ಪದವಿಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ ಹಾಗೂ ಸಿ.ಎ. ಸಂಯೋಜಕರಾದ ಅನಂತಶಯನ, ಅಪರ್ಣಾ ಕೆ., ಅಭಿನಂದಿಸಿದ್ದಾರೆ.

Post a Comment

0 Comments