ಲಕ್ಷಾಂತರ ರೂ. ವಂಚನೆ - ಅಂಚೆ ಪಾಲಕನ ಬಂಧನ

ಜಾಹೀರಾತು/Advertisment
ಜಾಹೀರಾತು/Advertisment

 ಲಕ್ಷಾಂತರ ರೂ. ವಂಚನೆ - ಅಂಚೆ ಪಾಲಕನ  ಬಂಧನ


 ಮೂಡುಬಿದಿರೆ : ಅಂಚೆ ಇಲಾಖೆಯಲ್ಲಿ ಗ್ರಾಹಕರ ವಿಮಾ ಪಾಲಿಸಿಗಳಿಗೆ ಜಮೆ ಮಾಡಲು ಪಾವತಿಸಿದ ಮೊತ್ತದಲ್ಲಿ ಲಕ್ಷಾಂತರ ರೂ. ಗುಳುಂ ಮಾಡಿ ವಂಚಿಸಿರುವ ಪ್ರಕರಣದಲ್ಲಿ ಆರೋಪಿ ಅಂಚೆ ಪಾಲಕನನ್ನು  ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಕಂಡಂದಲೆ ಅಂಚೆ ಕಚೇರಿಯಲ್ಲಿ ಸಹಾಯಕ ಅಂಚೆ ಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ ಪ್ರಕರಣದ ಆರೋಪಿಯಾಗಿದ್ದಾರೆ. ಇವರು ೨೦೨೦ರ ಸೆ.೬ರಿಂದ ೨೦೨೧ರ ಜೂ ೧೯ರವರೆಗೆ ೪ ಗ್ರಾಹಕರ ಆರು ಪಾಲಸಿಗಳಲ್ಲಿ ಪಾವತಿಸಲು ನೀಡಿದ ಲಕ್ಷಾಂತರ ರೂ. ಮೊತ್ತವನ್ನು ಗ್ರಾಹಕರ ದಾಖಲೆಗಳಲ್ಲಿ ನಮೂದಿಸಿ ಇಲಾಖೆಯ ದಾಖಲೆಗಳಲ್ಲಿ ನಮೂದಿಸದೆ ವಂಚಿಸಿದ್ದರು. ಪ್ರಕರಣ ಬೆಳಕೆಗೆ ಬರುತ್ತಿದ್ದಂತೆ ಆರೋಪಿಯನ್ನು ಸೇವೆಯಿಂದ ಅಮಾನತುಗೊಳಿಸಿ ಹಿರಿಯ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದಾಗ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಬಂಟ್ವಾಳ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಪ್ರಹ್ಲಾದ್ ನಾಯಕ್ ಮೂಡುಬಿದಿರೆ ಪೋಲಿಸರಿಗೆ ದೂರು ನೀಡಿದ್ದರು. ಅದರಂತೆ ಮೂಡುಬಿದಿರೆ ಪೊಲೀಸರು ಆರೋಪಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

Post a Comment

0 Comments