"ಕೂಸಿನ ಮನೆ" ಕೇಂದ್ರ ಉದ್ಘಾಟನೆ
ಮೂಡುಬಿದಿರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಆಯ್ಕೆಯಾದ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಂಡ್ರಕೆರೆಯಲ್ಲಿ "ಕೂಸಿನ ಮನೆ" ಕೇಂದ್ರದ ಉದ್ಘಾಟನೆಯು ಬುಧವಾರ ನಡೆಯಿತು.
ಪಡುಮಾರ್ನಾಡು ಗ್ರಾ.ಪಂ.ಅಧ್ಯಕ್ಷ ವಾಸುದೇವ ಕೂಸಿನ ಮನೆ ಕೇಂದ್ರವನ್ನ ವಾಸುದೇವ ಭಟ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾ.ಪಂ .ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ,ಸದಸ್ಯರಾದ ಸಿ.ಎಸ್ ಕಲ್ಯಾಣಿ, ಸತೀಶ್ ಕರ್ಕೇರಾ, ವಿಶ್ವನಾಥ್, ಮಹಿಳಾ ಮತ್ತು ಮಕ್ಕಳ ಮೇಲ್ವಿಚಾರಕಿ ರತಿ ,ಗ್ರಾ.ಪಂ ಸಿಬ್ಬಂದಿಗಳು, ಎಸ್.ಡಿ.ಎಂ.ಸಿ ಉಪಾಧ್ಯಕ್ಷರು/ಸದಸ್ಯರು, ಶಾಲಾ ಮುಖ್ಯ ಶಿಕ್ಷಕರು, ಹಾಗೂ ಶಿಕ್ಷಕರು, ಅಂಗನವಾಡಿ ಕಾರ್ಯ ಕರ್ತೆ, ಕೂಸಿನ ಮನೆ ಶಿಶುಪಾಲನ ಕೇಂದ್ರದ ಕೇರ್ ಟೇಕರ್ಸ್, ಸಂಜೀವಿನಿ ಒಕ್ಕೂಟದ ಸದಸ್ಯರು, ನರೇಗಾ ಮಹಿಳಾ ಫಲಾನುಭವಿಗಳು ಉಪಸ್ಥಿತರಿದ್ದರು.
0 Comments