ಮಹಿಳೆಯರ ಆರ್ಥಿಕ ಶಕ್ತಿ ಅಭಿವೃದ್ಧಿಗೆ ಸಂಜೀವಿನಿ ಒಕ್ಕೂಟ ಸಹಕಾರಿ: ಸಾಯೀಶ ಚೌಟ
ಮೂಡುಬಿದಿರೆ: ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸ್ವಸಹಾಯ ಗುಂಪುಗಳನ್ನು ಮಾಡಿ ಸರಕಾರವೇ ನಿಧಿಯನ್ನು ಸೃಜನೆ ಮಾಡಿ ಮಹಿಳೆಯರ ಆರ್ಥಿಕ ಶಕ್ತಿಯನ್ನು ಅಭಿವೃದ್ದಿ ಪಡಿಸಲು ಸಂಜೀವಿನಿ ಒಕ್ಕೂಟದ ಮೂಲಕ ಸಹಾಯ ಮಾಡುತ್ತಿದೆ. ತಾಲೂಕಿನ ಹನ್ನೆರಡು ಪಂಚಾಯತ್ ನ ಸಂಜೀವಿನಿ ಒಕ್ಕೂಟದ ಸದಸ್ಯರು ಇದರ ಸದುಪಯೋಗವನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ತಾಲೂಕು ಪಂಚಾಯತ್ ನ ಪ್ರಭಾರ ಸಹಾಯಕ ನಿರ್ದೇಶಕ ಸಾಯೀಶ ಚೌಟ ಅವರು ಹೇಳಿದರು.
ಅವರು ತಾಲೂಕು ಕಛೇರಿಯಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಸಂಜೀವಿನಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭವನ್ನು ಉಧ್ಘಾಟಿಸಿ ಮಾತನಾಡಿದರು.
ನೆಲ್ಲಿಕಾರು ಒಕ್ಕೂಟದ ಸರೋಜಿನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸುಬ್ರಮಣ್ಯ ನಾಯ್ಕ್ ಅನುಪಾಲನ ವರದಿಯನ್ನು ವಾಚಿಸಿದರು.
ತಾಲೂಕು ಮಟ್ಟದ ಧರಣಿ ಸಂಜೀವಿನಿ ಒಕ್ಕೂಟದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಯನ್ನು ಆಯ್ಕೆ ಮಾಡಲಾಯಿತು. ತಾಲೂಕಿನ ಹನ್ನೆರಡು ಗ್ರಾಮ ಪಂಚಾಯತ್ ನ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು,ಅಧ್ಯಕ್ಷರಾಗಿ ಶಾರದಾ (ಪಾಲಡ್ಕ),ಉಪಾಧ್ಯಕ್ಷರು ಹೇಮಲತಾ (ಹೊಸಬೆಟ್ಟು), ಕಾರ್ಯದರ್ಶಿಯಾಗಿ ಕುಮಾರಿ ವನಿತಾ (ಪಡುಮಾರ್ನಾಡು)ಜೊತೆ ಕಾರ್ಯದರ್ಶಿಯಾಗಿ ಪ್ರೇಮ (ದರೆಗುಡ್ಡೆ)ಖಜಾಂಜಿಯಾಗಿ ಪ್ರಮೀಳ (ಇರುವೈಲ್) ಇವರು ಆಯ್ಕೆಯಾದರು.
0 Comments