ಆಲಂಗಾರು ಬಾಲ ಯೇಸು ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ : ಹೊರೆಕಾಣಿಕೆ ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment

 ಆಲಂಗಾರು ಬಾಲ ಯೇಸು ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ : ಹೊರೆಕಾಣಿಕೆ ಮೆರವಣಿಗೆ

ಮೂಡುಬಿದಿರೆ:   ಭಾನುವಾರದಂದು ನಡೆಯಲಿರುವ ಅಲಂಗಾರು ಬಾಲ ಯೇಸು ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದಂಗವಾಗಿ  ಶುಕ್ರವಾರ ಸಂಜೆ ಅಲಂಗಾರಿನಿಂದ ಪುಣ್ಯ ಕ್ಷೇತ್ರಕ್ಕೆ ಹೊರೆ ಕಾಣಿಕೆಯ ಮೆರವಣಿಗೆ ನಡೆಯಿತು. ಮೂಡಬಿದ್ರಿ ವಲಯದ ಪ್ರಧಾನ ಕ್ರೈಸ್ತ ಧರ್ಮಗುರುಗಳಾದ ರೇ.ಪಾ ಒನಿಲ್ ಡಿಸೋಜಾ ಅವರು ಆಶೀರ್ವಾದದ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಪುಣ್ಯ ಕ್ಷೇತ್ರದ ಧರ್ಮಗುರು ರೇ .ಪಾ ವಾಲ್ಟರ್ ಡಿಸೋಜಾ ಇವರೊಂದಿಗೆ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.


 ಈ ಸಂದರ್ಭದಲ್ಲಿ ಚರ್ಚ್ ಪಾಲನ ಮಂಡಳಿಯ ಪದಾಧಿಕಾರಿಗಳು ಹಾಗೂ ವಾರ್ಡ್ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Post a Comment

0 Comments