ಫಲ್ಗುಣಿ ನದಿಗೆ ಹೆಚ್ಚುವರಿ ಹಲಗೆ ಹಾಕಿಸಲು ಶಾಸಕರಿಗೆ ಮನವಿ
ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮದ ರೈತರಿಗೆ ಉಪಯೋಗವಾಗುವಂತೆ ಫಲ್ಗುಣಿ ನದಿಗೆ ಶಿರ್ತಾಡಿ ಗ್ರಾಮದ ಪಾಪೆ ಎಂಬಲ್ಲಿ ಆಣೆಕಟ್ಟು ನಿರ್ಮಾಣವಾಗುತ್ತಿದ್ದು 03 ಹಲಗೆ ಅಳವಡಿಸಲಾಗಿದೆ. ಇದರಿಂದ ಕೇವಲ 25 ಜಮೀನಿನ ರೈತರಿಗೆ ಮಾತ್ರ ನೀರು ಸಿಗುತ್ತಿದೆ ಆದ್ದರಿಂದ 1ಮೀಟರ್ ಹೆಚ್ಚುವರಿ ಹಲಗೆಯನ್ನು ಹಾಕಿಸಿ ಇನ್ನು ಹೆಚ್ಚಿನ 60 ಮಂದಿ ರೈತರಿಗೆ ಅನುಕೂಲವಾಗುವಂತೆ ಮಾಡಿಕೊಡುವಂತೆ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರಿಗೆ ಭಾರತೀಯ ಕಿಸಾನ್ ಸಂಘವು ಮನವಿಯನ್ನು ಸಲ್ಲಿಸಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ , ವಕೀಲ ಶಾಂತಿಪ್ರಸಾದ್ ಹೆಗ್ಡೆ ಮತ್ತು ಸದಸ್ಯರು ಈ ಸಂದರ್ಭದಲ್ಲಿದ್ದರು.
0 Comments