ಸಿ.ಎ, ಮ್ಯಾನೇಜ್‌ಮೆಂಟ್, ವಾಣಿಜ್ಯ ಕ್ಷೇತ್ರದ ಅಧ್ಯಯನ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ

ಜಾಹೀರಾತು/Advertisment
ಜಾಹೀರಾತು/Advertisment

 ಸಿ.ಎ, ಮ್ಯಾನೇಜ್‌ಮೆಂಟ್, ವಾಣಿಜ್ಯ ಕ್ಷೇತ್ರದ ಅಧ್ಯಯನ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ 


ಐಸಿಎಐ ಜೊತೆ ಆಳ್ವಾಸ್ ಮಹತ್ತರ ಒಡಂಬಡಿಕೆ

ಮೂಡುಬಿದಿರೆ : ವಾಣಿಜ್ಯ ಅಧ್ಯಯನ ಕ್ಷೇತ್ರದಲ್ಲಿ ಅಕಾಡೆಮಿಕ್, ಸಂಶೋಧನೆ ಹಾಗೂ ತರಬೇತಿಯ ನಿಟ್ಟಿನಲ್ಲಿ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾಲೇಜು ಮತ್ತು ದೆಹಲಿಯ ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡುವೆ ಮಂಗಳೂರಿನಲ್ಲಿ ಗುರುವಾರ ಮಹತ್ತರ ಒಡಂಬಡಿಕೆಗೆ ಸಹಿ ಮಾಡಲಾಯಿತು. 

ಈ ಒಡಂಬಡಿಕೆಯ ಅನ್ವಯ ಎರಡೂ ಸಂಸ್ಥೆಗಳಲ್ಲಿ ಬೌದ್ಧಿಕ ಹಾಗೂ ಸಾಂಸ್ಕೃತಿಕ ಉನ್ನತೀಕರಣದ ನಿಟ್ಟಿನಲ್ಲಿ ಬಿ.ಕಾಂ, ಬಿ.ಕಾಂ.(ಹಾರ‍್ಸ್), ಎಂ.ಕಾA ಮತ್ತು ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ವಾಣಿಜ್ಯ ಕೋರ್ಸ್ಗಳ ಅಭಿವೃದ್ಧಿ ಹಾಗೂ ಪರಸ್ಪರ ಸಹಕಾರಕ್ಕೆ ನೆರವಾಗಲಿದೆ. 

ಅಕಾಡೆಮಿಕ್ ಮತ್ತು ವೃತ್ತಿಪರತೆ ವರ್ಧನೆಗಾಗಿ ಪರಸ್ಪರ ಸಹಕಾರ ನೀಡುವುದು ಹಾಗೂ ಸೌಹಾರ್ದ ಸಂಬಂಧವನ್ನು ಮುಂದುವರಿಸುವುದು.

ಎರಡೂ ಸಂಸ್ಥೆಗಳ ಧ್ಯೇಯೋದ್ದೇಶವನ್ನು ಪರಸ್ಪರ ಗೌರವಿಸಿಕೊಂಡು  ಅಕಾಡೆಮಿಕ್ಸ್, ಸಂಶೋಧನೆ ಮತ್ತು ತರಬೇತಿ ಕ್ಷೇತ್ರದಲ್ಲಿನ ಜ್ಞಾನ ಹಾಗೂ ಕೌಶಲ ವೃದ್ಧಿಗಾಗಿ ಕೈ ಜೋಡಿಸುವುದು.

ಪಠ್ಯಕ್ರಮ ನಿರೂಪಣೆ, ಶೈಕ್ಷಣಿಕ ಸಿಬ್ಬಂದಿಗೆ ವಿಷಯ ಆಧಾರಿತ ತರಬೇತಿಗೆ ಐಸಿಎಐಯು ಸಂಪೂರ್ಣ ಬೆಂಬಲವನ್ನು ನೀಡಲಿದೆ. 

ಹೊಸ ಶಿಕ್ಷಣ ನೀತಿ (೨೦೨೦)ಗೆ ಪೂರಕವಾಗಿ ವಾಣಿಜ್ಯ ಕೋರ್ಸ್ಗಳ ಉನ್ನತೀಕರಣಕ್ಕಾಗಿ ಅಗತ್ಯ ಅಧಿವೇಶನಗಳನ್ನು ಹಾಗೂ ವಿಶೇಷ ತರಬೇತಿಗಳನ್ನು ನಡೆಸಲು ಐಸಿಎಐ ಬದ್ಧವಾಗಲಿದೆ. 

ಆಳ್ವಾಸ್ ಕಾಲೇಜಿನ ವಾಣಿಜ್ಯ ಸ್ನಾತಕೋತ್ತರ ಪದವಿ, ಪಿಎಚ್.ಡಿ (ಆಡಳಿತ ನಿರ್ವಹಣೆ) ಹಾಗೂ ವಾಣಿಜ್ಯ ಸಂಬAಧಿತ ಕಾರ್ಯಕ್ರಮಗಳಿಗೆ ಐಸಿಎಐ ಮಾನ್ಯತೆ ನೀಡಲಿದೆ. 

ಈ ಮಹತ್ತರ ಒಡಂಬಡಿಕೆಯ ಸಂದರ್ಭದಲ್ಲಿ ಪ್ರತಿಷ್ಠಿತ ಐಸಿಎಐ ಉಪಾಧ್ಯಕ್ಷ  sಸಿಎ. ದಯಾನಿವಾಸ ಶರ್ಮಾ, ಕೇಂದ್ರೀಯ ಮಂಡಳಿ ಸದಸ್ಯ  ಸಿಎ. ಕೋತಾ ಎಸ್. ಶ್ರೀನಿವಾಸ್, ಮಂಗಳೂರು ಘಟಕದ ಅಧ್ಯಕ್ಷ ಸಿಎ. ಗೌತಮ್ ನಾಯಕ್ ಎಂ. ಹಾಗೂ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್,  ಕಾಲೇಜಿನ ಸಿಎ ಸಂಯೋಜಕರಾದ ಅನಂತಶಯನ ಮತ್ತು  ಅಪರ್ಣಾ ಕೆ. ಇದ್ದರು.

Post a Comment

0 Comments