ಪುತ್ತಿಗೆ ಅಂಗನವಾಡಿ ಪುಟಾಣಿಗಳಿಗೆ ಸಮವಸ್ತ್ರ ವಿತರಣೆ
ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್, ನೆಲ್ಲಿಗುಡ್ಡೆ ಮಿತ್ರ ಮಂಡಳಿ (ರಿ ) ಹಾಗೂ ಪುತ್ತಿಗೆ ಗ್ರಾ.ಪಂಚಾಯತ್ ನ ಸದಸ್ಯ, ಕೊಡುಗೈ ದಾನಿ ಪುರುಷೋತ್ತಮ್ ನಾಯಕ್ ಇವರ ಸಹಬಾಗಿತ್ವದಲ್ಲಿ ಪುತ್ತಿಗೆ ಅಂಗನವಾಡಿಯ 32 ಪುಟಾಣಿಗಳಿಗೆ ಸಮವಸ್ತ್ರ ವಿತರಸಲಾಯಿತು.
ರೋಟರಿ ಮಿಡ್ ಟೌನ್ ಅಧ್ಯಕ್ಷ ಮಹೇಂದ್ರ ಕುಮಾರ್ ಜೈನ್, ದಾನಿ ಪುರುಷೋತ್ತಮ್ ನಾಯಕ್, ರೋಟರಿ ವರ್ಷದ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಸುಶಾಂತ್ ಕರ್ಕೇರಾ, ಪುಷ್ಪರಾಜ್ ಜೈನ್, ನಿಯೋಜಿತ ಅಧ್ಯಕ್ಷ ವಿದೇಶ್ ಎಂ., ರೋಟರಿ ಮಾಜಿ ಅಧ್ಯಕ್ಷ, ನೆಲ್ಲಿಗುಡ್ಡೆ ಮಿತ್ರ ಮಂಡಳಿ ಅಧ್ಯಕ್ಷ ಪ್ರಶಾಂತ್ ಕೆ ಭಂಡಾರಿ, ಕಾರ್ಯದರ್ಶಿ ರಂಜನ್ ಪೂಜಾರಿ ಪುತ್ತಿಗೆ ಈ ಸಂದರ್ಭ ಉಪಸ್ಥಿತರಿದ್ದರು.
0 Comments