ಉದ್ಯಮಿಯಿಂದ ಕರಿಂಜೆ ದೈವಸ್ಥಾನಕ್ಕೆ ಹಾನಿ: ಅಂತಿಮ ತೀರ್ಮಾನವರೆಗೆ ಕೋಲ, ಬಲಿ ಉತ್ಸವ ಇಲ್ಲ

ಜಾಹೀರಾತು/Advertisment
ಜಾಹೀರಾತು/Advertisment

 ಉದ್ಯಮಿಯಿಂದ ಕರಿಂಜೆ ದೈವಸ್ಥಾನಕ್ಕೆ ಹಾನಿ: ಅಂತಿಮ ತೀರ್ಮಾನವರೆಗೆ ಕೋಲ, ಬಲಿ ಉತ್ಸವ ಇಲ್ಲ

ಮೂಡುಬಿದಿರೆ: ನಂಬಿಕೆ, ಪರಂಪರೆ, ಕಟ್ಟು ಕಟ್ಟಳೆ, ಪದ್ಧತಿ, ಆಚರಣೆ ಮತ್ತು ಧಾರ್ಮಿಕ ವಿಚಾರಧಾರೆಗಳನ್ನು ಕಾನೂನುಗಳ ಜತೆ ತಳುಕು ಹಾಕಬಾರದು. ಪುರಾತನ ದೈವಸ್ಥಾನದ ಬುಡದವರೆಗೆ ಜೆಸಿಬಿ ಯಂತ್ರದ ಮೂಲಕ  ಅಪಾಯಕಾರಿಯಾಗಿ ಅಗೆದು ಧಾರ್ಮಿಕ ನಂಬಿಕೆಗೆ ಅಡ್ಡಿಪಡಿಸುವುದು ಖಂಡನೀಯ. ಅಪರಾಧಿಗಳ ಬಗ್ಗೆ ಪೊಲೀಸರು ಮೃದು ಧೋರಣೆ ಹೊಂದಿರುವುದು ಸರಿಯಲ್ಲ ಈ ಬಗ್ಗೆ ಪೊಲೀಸ್ ಕಮೀಷನರ್ ನ್ನು ಸ್ವತ: ಭೇಟಿಯಾಗಿ ನಿಷ್ಪಕ್ಷ ತನಿಖೆಗೆ ಆಗ್ರಹಿಸಲಾಗುವುದೆಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

 ಇತ್ತೀಚೆಗೆ ಕರಿಂಜೆ ಉಳ್ಳಾಲ್ದ ಕೋಟೆ ದೈವಸ್ಥಾನಕ್ಕೆ ಉದ್ಯಮಿಯೋರ್ವರು ಹಾನಿ ಮಾಡಿರುವ ಘಟನೆಯನ್ನು ಖಂಡಿಸಿ ಭಾನುವಾರ ಕರಿಂಜೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ನಿಮ್ಮ ಹೋರಾಟದಲ್ಲಿ ತಾನು ಭಾಗವಹಿಸುತ್ತೇನೆಂದು ಭರವಸೆ ನೀಡಿದರು.

 

 ಪ್ರಕರಣವೊಂದು ಅಂತಿಮ ತೀರ್ಮಾನಕ್ಕೆ ಬರುವ ತನಕ ಊರಿನ ಜಾತ್ರೆ ಸಹಿತ ಗ್ರಾಮದಲ್ಲಿ ದೈವ ಸಂಬಂಧಿತ ಕೋಲ, ಬಲಿ ಉತ್ಸವವನ್ನು ನಡೆಸುವುದಿಲ್ಲವೆಂದು ಸರ್ವಾನುಮತದಿಂದ ಸಭೆಯಲ್ಲಿ ತೀರ್ಮಾನಿಸಲಾಯಿತು. ಅಪರಾಧಿಗಳು ರಾಜಾರೋಷವಾಗಿ ತಿರುಗುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತ್ತಾಗಿದೆ. ವಿಕೃತಿ ಮೆರೆದವರಿಗೆ ಸದ್ಬುದ್ಧಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಲಾಯಿತು.

  ಸಭೆಯ ಅಧ್ಯಕ್ಷತೆಯನ್ನು ಕರಿಂಜೆಗುತ್ತು ಕೃಷ್ಣರಾಜ ಹೆಗ್ಡೆ ವಹಿಸಿದ್ದರು. ಮಾರೂರು ಖಂಡಿಗ ರಾಮದಾಸ ಅಸ್ರಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

 ಸ್ಥಳೀಯರಾದ ಕೆ.ಶ್ರೀಪತಿ ಭಟ್, ರಾಜ್ಯ ರೈತ ಸಂಘಟನೆಯ ಮನೋಹರ ಶೆಟ್ಟಿ ಕುಪ್ಪೆಪದವು, ಆಲಂಗಾರು ಗುತ್ತು ಶ್ರೀನಿವಾಸ ಆಳ್ವ ಸಹಿತ ಗ್ರಾಮದ ಗುತ್ತು ಬರ್ಕೆ ಮನೆತನದವರು ಭಾಗವಹಿಸಿದ್ದರು.

Post a Comment

0 Comments