ಜ.21, 22: ಅಶ್ವತ್ಥಪುರದಲ್ಲಿ ಅಯೋಧ್ಯಾ ಸಂಭ್ರಮೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಜ.21, 22: ಅಶ್ವತ್ಥಪುರದಲ್ಲಿ ಅಯೋಧ್ಯಾ ಸಂಭ್ರಮೋತ್ಸವ



ಮೂಡುಬಿದಿರೆ, ಜ.20: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀ ಬಾಲರಾಮ (ರಾಮಲಲ್ಲಾ) ಮೂರ್ತಿ ಪ್ರಾಣ ಪ್ರತಿಷ್ಠೆ ಅಂಗವಾಗಿ  ಜ.21 ಮತ್ತು 22ರಂದು ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಸಂಭ್ರಮೋತ್ಸವ ನಡೆಯಲಿದೆ.

ಜ.21ರ ಬೆಳಿಗ್ಗೆ 7 ಗಂಟೆಯಿಂದ 22ರ ಬೆಳಿಗ್ಗೆ 7 ಗಂಟೆ ವರೆಗೆ ಏಕಾಹ ಶ್ರೀರಾಮನಾಮ ನಡೆಯಲಿದೆ.

ಜ.22ರಂದು ಶ್ರೀದೇವಳದಲ್ಲಿ ವಿಶೇಷ ಪೂಜೆ, ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ವಿವಿಧ ಮಂಡಳಿಗಳಿಂದ ಭಜನೆ, ರಾತ್ರಿ 7ರಿಂದ ದೀಪೋತ್ಸವ, ಪಲ್ಲಕಿ ಉತ್ಸವ ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.


ಭಾಗವಹಿಸುವ ಭಜನಾ ಮಂಡಳಿಗಳು

ಶ್ರೀ ಭವಾನಿಶಂಕರ ಭಜನಾ ಮಂಡಳಿ ಮಂಜನಬೈಲು, ಶ್ರೀ ರಾಮರಂಜಿನಿ ಭಜನಾ ಮಂಡಳಿ ಅಶ್ವತ್ಥಪುರ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ದೈಲಬೆಟ್ಟು ಕಲ್ಲಮುಂಡೂರು, ಶ್ರೀ ದಾಶರಥಿ ಭಜನಾ ಬಳಗ ಕಾವೂರು ಮಂಗಳೂರು, ಶ್ರೀ ಜಯದುರ್ಗಾ ಭಜನಾ ಮಂಡಳಿ ಕನ್ನರ್ಪಾಡಿ ಉಡುಪಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮುಚ್ಚೂರು, ಶ್ರೀ ಲಕ್ಷ್ಮೀನಾರಸಿಂಹ ಭಜನಾ ಮಂಡಳಿ ನಿಡ್ಡೋಡಿ, ಶ್ರೀ ತುಕಾರಾಮ ಭಜನಾ ಮಂಡಳಿ ಬಾನಂಗಡಿ ಕಲ್ಲಮುಂಡ್ಕೂರು ಮತ್ತು ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ನೀರ್ಕೆರೆ ಅಶ್ವತ್ಥಪುರ.

Post a Comment

0 Comments