ಧರ್ಮಸ್ಥಳದ ಅವಹೇಳನ: ರಾಧಿಕಾ ಕಾಸರಗೋಡಿಗೆ ಜೈಲೇ ಗತಿ
ಧರ್ಮಸ್ಥಳ ದೇವಸ್ಥಾನ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅವಹೇಳನದ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದ ಅಡಿಯಲ್ಲಿ ರಾಧಿಕಾ ಕಾಸರಗೋಡು ಅಲಿಯಾಸ್ ಅನಿತಾ ಕಾಸರಗೋಡು ಎಂಬಾಕೆಯನ್ನು ಬಂಧಿಸಲಾಗಿತ್ತು.
ನಂತರ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ವಿಚಾರಣೆ ಮುಂದುವರೆದಿದೆ. ಜಾಮೀನು ಅರ್ಜಿ ಸೋಮವಾರದವರೆಗೆ ಕಾಯಬೇಕಾದ ಕಾರಣ ಅಲ್ಲಿಯವರೆಗೆ ಜೈಲುವಾಸ ಅನುಭವಿಸಬೇಕಾಗಿದೆ.
ಇನ್ನುಳಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಹಾಗೂ ಇಲ್ಲಿನ ಭಕ್ತರನ್ನು ಅವಾಚ್ಯ ಪದಗಳಿಂದ ನಿಂದಿಸುವ ಸಮರ್ ಆಳ್ವಾ ಹಾಗೂ ಇತರರಿಗೆ ಪೊಲೀಸರು ಶೋಧ ನಡೆಸಿದ್ದಾರೆ ಎನ್ನಲಾಗಿದೆ.
0 Comments