ಮೂಡುಬಿದಿರೆಯಲ್ಲಿ ಶ್ರೀ ರಾಮ ನಾಮ ನಗರ ಭಜನಾ ಸಂಕೀರ್ತನೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಶ್ರೀ ರಾಮ ನಾಮ ನಗರ ಭಜನಾ ಸಂಕೀರ್ತನೆ

ಮೂಡುಬಿದಿರೆ : ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರನ ವಿಗ್ರಹದ ಪ್ರಾಣ ಪ್ರತಿಷ್ಠೆಗೆ ಪೂರಕವಾಗಿ ಮೂಡುಬಿದಿರೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಜವನೆರ್ ಬೆದ್ರ ಫೌಂಡೇಷನ್ (ರಿ) ಸಹಯೋಗದಲ್ಲಿ ಭಾನುವಾರ ಸಂಜೆ ಶ್ರೀ ರಾಮನಾಮ ನಗರ ಭಜನಾ ಸಂಕೀರ್ತನೆ ನಡೆಯಿತು.

  ಊರ ಭಜನಾ ಮಂಡಳಿಗಳು, ಸಮುದಾಯ ಸಂಘಗಳು, ವಿವಿಧ ಸಂಸ್ಥೆಗಳ ಪಾಲ್ಗೊಳ್ಳುವಿಕೆಯ ಮೂಲಕ ಗೋಪಾಲಕೃಷ್ಣ ದೇವಸ್ಥಾನದಿಂದ ಸಂಕೀರ್ತನಾ ಮೆರವಣಿಗೆಯು ಹೊರಟು ನಿಶ್ಮಿತಾ ಸರ್ಕಲ್ ವರೆಗೆ ತೆರಳಿ ದೇವಸ್ಥಾನಕ್ಕೆ ಹಿಂತಿರುಗಿ ವಿಶೇಷ ಪೂಜೆ ನಡೆಯಿತು.


ಉದ್ಯಮಿ ಶ್ರೀಪತಿ ಭಟ್, ಮೂಡುಬಿದಿರೆ ಶ್ರೀ ವೆಂಕಟರಮಣ ಹಾಗೂ ಹನುಮಂತ ದೇವಸ್ಥಾನದ ಮೊಕ್ತೇಸರ ಉಮೇಶ್ ಪೈ, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಮಮತಾ ಆನಂದ ರಾವ್, ಉದ್ಯಮಿ ಗಜೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭಜನಾ ಸಂಕೀರ್ತನೆಗೆ ಚಾಲನೆ ನೀಡಿದರು.

 ಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮುಖ್ಯಸ್ಥ ಗುರುಪ್ರಸಾದ್ ಹೊಳ್ಳ ಮತ್ತು ಜವನೆರ್ ಬೆದ್ರದ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಈ ಸಂದರ್ಭದಲ್ಲಿದ್ದರು.

Post a Comment

0 Comments