*ಶ್ರೀರಾಮ ಮಂದಿರ ಲೋಕಾರ್ಪಣೆ ನಿಮಿತ್ತ ದೇವಸ್ಥಾನ ಸ್ವಚ್ಛತಾ ಅಭಿಯಾನ*
*ಉಡುಪಿ* - ನೂರಾರು ವರ್ಷಗಳ ಪ್ರತೀಕ್ಷೆಯ ನಂತರ ಜನವರಿ ೨೨ ರಂದು ಅಯೋಧ್ಯೆಯ ಪವಿತ್ರ ಶ್ರೀ ರಾಮಜನ್ಮಭೂಮಿಯಲ್ಲಿ ಭಗವಾನ ಶ್ರೀರಾಮನು ಪುನಃ ಅವತರಿಸುತ್ತಿದ್ದಾನೆ. ಇದು ರಾಮಭಕ್ತರಿಗೆ ಅತ್ಯಂತ ಆನಂದ ಹಾಗೂ ಹರ್ಷದ ಕ್ಷಣ. ಈ ಸಮಯದಲ್ಲಿ ಪ್ರಭು ಶ್ರೀರಾಮನ ನಾಮಜಪ ಮಾಡಿ ಅವರ ಭಕ್ತಿಯನ್ನು ಮಾಡುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಉಡುಪಿ ಜಿಲ್ಲೆಯ ಹಲವಾರು ಶ್ರೀರಾಮ ಮಂದಿರ ಹಾಗೂ ದೇವಸ್ಥಾನಗಳಲ್ಲಿ ರಾಮರಾಜ್ಯದ ಪ್ರತಿಜ್ಞೆಯೊಂದಿಗೆ ದೇವಸ್ಥಾನಗಳ ಸ್ವಚ್ಛತೆಯನ್ನು ನಡೆಸಲಾಯಿತು.
ಲಕ್ಷಾಂತರ ಹಿಂದೂಗಳ ಬಲಿದಾನದ ನಂತರ ಅಯೋಧ್ಯೆಯಲ್ಲಿ ಭಗವಾನ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಇದು ಒಂದು ಐತಿಹಾಸಿಕ ಕ್ಷಣವಾಗಿದೆ. ಈ ಶ್ರೀ ರಾಮಜನ್ಮಭೂಮಿಯ ಮುಕ್ತಿಗಾಗಿ ಪ್ರಯತ್ನಿಸಿದವರ ಮತ್ತು ತಮ್ಮ ಪ್ರಾಣದ ಬಲಿದಾನ ಮಾಡಿದ ರಾಮಭಕ್ತರನ್ನು ಹಿಂದೂ ಜನಜಾಗೃತಿ ಸಮಿತಿಯು ಕೃತಜ್ಞತಾ ಭಾವದಿಂದ ಸ್ಮರಿಸುತ್ತದೆ.
ಕಳೆದ ಅನೇಕ ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿಯಿಂದ ದೇಶದಾದ್ಯಂತ ದೇವಸ್ಥಾನಗಳ ಸ್ವಚ್ಛತೆಯ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಬಾರಿ ಸ್ವಯಂ ದೇಶದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿಯವರಿಂದಲೂ ದೇವಸ್ಥಾನಗಳಲ್ಲಿ ಸ್ವಚ್ಛತೆಯ ಅಭಿಯಾನ ನಡೆಸಲು ಜನತೆಗೆ ಆಹ್ವಾನ ನೀಡಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಹಿಂದೂ ಜನಜಾಗೃತಿ ಸಮಿತಿಯ ಮೂಲಕ ದಿನಾಂಕ 15 ರಿಂದ 21 ಜನವರಿ 2024 ರ ಅವಧಿಯಲ್ಲಿ ಕರ್ನಾಟಕದಾದ್ಯಂತ ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನ ಮಾಡಲಾಗಿದೆ.
0 Comments