ಬಳ್ಕುಂಜೆಯಲ್ಲಿ ಕುದಿ ಕಂಬಳ : ಹೊಳೆಗೆ ಹಾರಿ ಪ್ರಾಣಬಿಟ್ಟ ದೂಜ

ಜಾಹೀರಾತು/Advertisment
ಜಾಹೀರಾತು/Advertisment

 ಬಳ್ಕುಂಜೆಯಲ್ಲಿ ಕುದಿ ಕಂಬಳ : ಹೊಳೆಗೆ ಹಾರಿ ಪ್ರಾಣಬಿಟ್ಟ ದೂಜ

ಮೂಡುಬಿದಿರೆ : ಕಂಬಳದ ಕನೆ ಹಲಗೆ ವಿಭಾಗದಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದ ತಿರುವೈಲು ಗುತ್ತುವಿನ ದೂಜ ಹೆಸರಿನ ಕೋಣವು ಭಾನುವಾರ ಶಾಂಭವಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದೆ. 


ಬಳ್ಕುಂಜೆ  ಕಂಬಳದ ರೂವಾರಿ ಮಲ್ಲಿಕಾ ಯಶವಂತ ಶೆಟ್ಪಿ ತನ್ನ ಜತೆ ಇರುವ ಕಂಬಳದ ಕೋಣಕ್ಕೆ ಜೊತೆ ಮಾಡಿಸಲು ತಿರುವೈಲು ಗುತ್ತುವಿನ ಕಂಬಳದ ಕೋಣ ದೂಜನನ್ನು ತರಿಸಿ ಭಾನುವಾರ ಕೋಟ್ನಾಯ ಗುತ್ತುವಿನಲ್ಲಿ   ಕುದಿ  ಕಂಬಳವನ್ನು ಏಪ೯ಡಿಸಿದ್ದರು.

 ಭಟ್ಕಳದ ಕಂಬಳ ಓಟಗಾರ ಕುದಿ ಕಂಬಳದ ಕರೆಗೆ ಕೋಣಗಳನ್ನು ಇಳಿಸಿದ್ದು ಈ ಸಂದಭ೯ ಕೋಣಗಳು ಹಾಯಲು ಬಂದ ರೀತಿಯಲ್ಲಿ ಓಡಲು ಯತ್ನಿಸಿದಾಗ ಓಟಗಾರ ಜಾರಿ ಬಿದ್ದಿದ್ದಾರೆ. ಆದರೆ ಕೋಣಗಳು ತಮ್ಮನ್ನು ತಡೆಯಲು ಬಂದ ಜನರ ಕೈಗೆ ಸಿಗದೆ ಏರ್ರಾಬಿರ್ರಿಯಾಗಿ ತೋಟದ ಮಧ್ಯೆ ಓಡಿ ಜುಮಾದಿ ದೈವಸ್ಥಾನದ ಬಳಿ ಸ್ವಲ್ಷ ನಿಂತು ಮತ್ತೆ ಓಡಿದ ಜೋಡೆತ್ತುಗಳು ಶಾಂಭವಿ ನದಿಗೆ ಹಾರಿದೆ ಈ ಸಂದಭ೯ದಲ್ಲಿ ದೂಜ ಪ್ರಾಣ ಕಳೆದುಕೊಂಡರೆ ಅದರ ಜತೆಯಲ್ಲಿದ್ದ ಇನ್ನೊಂದು ಕೋಣ ಮೇಲಕ್ಕೆ ಬಂದಿದೆ.

 

Post a Comment

0 Comments