ಮೂಡುಬಿದಿರೆ: ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲಾ ವಾರ್ಷಿಕೋತ್ಸವ
ಮೂಡುಬಿದಿರೆ : ಶ್ರೀ ಮಹಾವೀರ ವಿದ್ಯಾವರ್ಧಕ ಸಂಘ ಪ್ರವರ್ತಿತ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ವಾರ್ಷಿಕೋತ್ಸವವು ಮಾಜಿ ಸಚಿವ, ಪ್ರೌಢಶಾಲೆ ಮತ್ತು ಶ್ರೀ ಮಹಾವೀರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ. ಅಭಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಅನುದಾನಿತ ಶಾಲೆಗಳ ಸಂಕಷ್ಟ, ಆಂಗ್ಲ ಮಾಧ್ಯಮದ ಆಕರ್ಷಣೆ ಕುರಿತು ಪ್ರಸ್ತಾಪಿಸಿದ ಅಭಯಚಂದ್ರ ಅವರು ಭಾರತದ ಪ್ರಥಮ ರಾಷ್ಟ್ರಪತಿಯವರ ಹೆಸರು ಹೊತ್ತು ಆರಂಭವಾಗಿದ್ದ ಈ ಪ್ರೌಢಶಾಲೆಯು ವಿಶೇಷವಾಗಿ ಬಡವಿದ್ಯಾರ್ಥಿಗಳ ವಿದ್ಯೆಯ ಕನಸನ್ನು ನನಸಾಗಿಸುತ್ತ ಬಂದಿದೆ; ವಿದ್ಯಾಭಿಮಾನಿಗಳು ಶಾಲೆಯನ್ನು ಉಳಿಸಿ ಬೆಳೆಸಲು ಮುಂದೆ ಬರಬೇಕಾಗಿದೆ. ಎಂದರು.
ಮುಖ್ಯಅತಿಥಿಯಾಗಿ ಪಾಲ್ಗೊಂಡ ವಾರ್ಡ್ ಸದಸ್ಯೆ ಸ್ವಾತಿ ಎಸ್. ಪ್ರಭು ಮಾತನಾಡಿ, ಆಂಗ್ಲ ಮಾಧ್ಯಮದ ಶಿಕ್ಷಣ ಅತಿ ಜಾಗರೂಕತೆಯ ಮೂಲಕ ಮಕ್ಕಳ ಆತ್ಮವಿಶ್ವಾಸವನ್ನು ಕುಂದಿಸುವ ಕಾರ್ಯಮಾಡಿದರೆ, ಕನ್ನಡ ಮಾಧ್ಯಮದ ಶಿಕ್ಷಣ ಮುಕ್ತ ಮನಸ್ಸಿನೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವ, ಬದುಕನ್ನು ಎದುರಿಸುವ ಶಕ್ತಿಯನ್ನು ಕೊಡುತ್ತದೆ ಎಂದರು.
ಸಮ್ಮಾನ-ಶಾಲೆಗೆ ಕೊಡುಗೆ:
ಎಂಸಿಎಸ್ ಸೊಸೈಟಿ ಕೊಡಮಾಡಿದ ರಾಜ್ಯಮಟ್ಟದ ಕಲ್ಪವೃಕ್ಷ ಸಹಕಾರ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿರುವ ಮತ್ತು ಶಾಲಾಡಳಿತ ಮಂಡಳಿಯ ಗೌರವಾಧ್ಯಕ್ಷತೆಯಿಂದ ಅಧ್ಯಕ್ಷತೆಯ ಹೊಣೆಯನ್ನು ಸ್ವೀಕರಿಸಿರುವ ಅಭಯಚಂದ್ರ ಅವರನ್ನು ಸಮ್ಮಾನಿಸಲಾಯಿತು. ಪ್ರಶಸ್ತಿಯ ಜತೆಗೆ ನೀಡಲಾಗಿರುವ ಚಿನ್ನದ ಪದಕದ ಮೌಲ್ಯದ ರೂಪದಲ್ಲಿ ರೂ. ೫೫,೦೦೦ವನ್ನು ಅಭಯಚಂದ್ರ ಅವರು ಪ್ರೌಢಶಾಲೆಯ ವಿದ್ಯಾನಿಽಗೆ ಸಮರ್ಪಿಸಿದರು. ನಗದು ಪುರಸ್ಕಾರ ರೂ.೨೫,೦೦೦ವನ್ನು ಶ್ರೀ ಮಹಾವೀರ ಕಾಲೇಜು ಆಡಳಿತಕ್ಕೊಳಪಟ್ಟಿರುವ ಎ.ಜಿ. ಸೋನ್ಸ್ ಐಟಿಐಗೆ ನೀಡಿರುವುದಾಗಿ ಅವರು ಪ್ರಕಟಿಸಿದರು.
ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ಬಿಐಆರ್‌ಟಿ ಸುಶೀಲಾ, ಶಾಲೆಯ ಹಳೆವಿದ್ಯಾರ್ಥಿ ಭವಿಷ್ಯತ್ ಕೋಟ್ಯಾನ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾ. ಅಧ್ಯಕ್ಷ ಡಾ.ರಾಮಕೃಷ್ಣ ಶಿರೂರು, ಎಸ್‌ಕೆಡಿಆರ್‌ಡಿಪಿಯ ಸಂಯೋಜನಾಧಿಕಾರಿ ಶ್ರೀವರ್ಮ, ಶಾಲೆಯ ನಿವೃತ್ತ ಮುಖ್ಯಶಿಕ್ಷಕರಾದ ಬಾಹುಬಲಿ, ಪದ್ಮಜಾ, ನಿವೃತ್ತ ಶಿಕ್ಷಕರಾದ ಜನಾರ್ದನ, ಚಂದ್ರಕಲಾ, ಆಡಳಿತ ಮಂಡಳಿ ಉಪಾಧ್ಯಕ್ಷ ಪುಷ್ಪರಾಜ್, ಕೋಶಾಽಕಾರಿ ವೆಂಕಟೇಶ ಕಾಮತ್, ಸದಸ್ಯರಾದ ಅಜಿತ್‌ಕುಮಾರ್, ಯತಿರಾಜ, ಹರೀಶ್ ಪಿ., ಎಸ್‌ಎನ್‌ಎಂ ಪಾಲಿಟೆಕ್ನಿಕ್ ಪ್ರಾಂಶುಪಾಲ ಜೆ.ಜೆ.ಪಿಂಟೋ, ಎಸ್‌ಎಂಸಿ ಆಡಳಿತ ಮಂಡಳಿ ಸದಸ್ಯ ಸಿ.ಎಚ್. ಗಫೂರ್ ಪಾಲ್ಗೊಂಡು ಶುಭಹಾರೈಸಿದರು. ವಿದ್ಯಾರ್ಥಿ ನಾಯಕ ಸೋಮೇಶ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಂಕರ ಭಟ್ ವಿವರಣೆ ನೀಡಿದರು. ವಿವಿಧ ತರಬೇತುದಾರರು, ಸೇವೆಗಳನ್ನು ನೀಡಿದವರನ್ನು ಗೌರವಿಸಲಾಯಿತು.
ಶಾಲೆಯ ಸಂಚಾಲಕ ಪಿ. ರಾಮನಾಥ ಭಟ್ ಸ್ವಾಗತಿಸಿ, ಮುಖ್ಯ ಶಿಕ್ಷಕಿ ತೆರೆಸಾ ಖರ್ಡೋಜಾ ವರದಿ ವಾಚಿಸಿ, ವಿ|| ವೆಂಕಟರಮಣ ಕೆರೆಗದ್ದೆ ನಿರೂಪಿಸಿ, ಶಿಕ್ಷಕ ಕಿರಣ್ ಕುಮಾರ್ ವಂದಿಸಿದರು.
ಇತರ ಮನೋರಂಜನ ಕಲಾಪಗಳೊಂದಿಗೆ ರವಿಪ್ರಸಾದ್ ಕೆ. ಶೆಟ್ಟಿ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ` ಶ್ರೀನಿವಾಸ ಕಲ್ಯಾಣ' ಯಕ್ಷಗಾನ ಬಯಲಾಟ ಪ್ರಸ್ತುತಪಡಿಸಿದರು.
0 Comments