ಮೂಡುಬಿದಿರೆ ಕೇಂದ್ರ ಬದ್ರಿಯಾ ಜುಮಾ ಮಸೀದಿಗೆ ಖಾಝಿ ಸ್ವೀಕರಿಸುವ ಸಮಾರಂಭ
ಕೇಂದ್ರ ಬದ್ರಿಯಾ ಜುಮಾ ಮಸೀದಿ ಟೌನ್ ಮೂಡುಬಿದಿರೆ ಗೆ ಹಾಗೂ ಕೋಟೆಬಾಗಿಲು ಬದ್ರಿಯಾ ಜುಮಾ ಮಸೀದಿ ಮತ್ತು ಪುತ್ತಿಗೆಯ ರಿಫಾಯಿ ಜುಮಾ ಮಸೀದಿಗಳಿಗೆ ಖಾಝಿಯಾಗಿ ಗೌರವಾನ್ವಿತ ಅಲ್ ಹಾಜಿ ತ್ವಾಕಾ ಅಹ್ಮದ್ ಅಲ್ ಅಝ್ ಹರಿ ಅಲ್ ಖಾಸಿಮಿ ರವರನ್ನು ಖಾಝಿಯಾಗಿ ಸ್ವೀಕರಿಸುವ ಸಮಾರಂಭವು ಕೇಂದ್ರ ಟೌನ್ ಮಸೀದಿಯಲ್ಲಿ ಡಿ 8ರಂದು ಮಸೀದಿಯ ಅಧ್ಯಕ್ಷರಾದ ಎಮ್ ಅಬ್ದುಲ್ ರಹಿಮಾನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಅಧ್ಯಕ್ಷ ರು ಮಾತನಾಡಿ ಮಸೀದಿಯ ಹಿನ್ನೋಟ ಹಾಗೂ ಮುನ್ನೋಟವನ್ನು ವಿವರಿಸಿ ಸ್ವಾಗತಿಸಿದರು. ಮಸೀದಿಯ ಖತಾಬರಾದ ಹಾಜಿ ಅಬೂಬಕ್ಕರ್ ಸಿದ್ದೀಕ್ ದಾರಿವೀಯವರು ಪ್ರಾಸ್ತಾವಿಕ ಮಾತಿನಿಂದ ಖಾಝೀಯವರನ್ನು ಪರಿಚಯಿಸಿ ಖಾಝಿಯ ಸ್ಥಾನದ ಮಹತ್ವವನ್ನು ವಿವರಿಸಿ ಶುಭ ಹಾರೈಸಿದರು. ಕೋಟೆಬಾಗಿಲು ಜುಮಾ ಮಸೀದಿಯ ಅಧ್ಯಕ್ಷರಾದ ಸಲೀಂ ಖತೀಬರಾದ ಇಸ್ಮಾಯಿಲ್ ಫೈಝಿ ಮತ್ತು ಪುತ್ತಿಗೆ ರಿಫಾಯಿ ಜುಮಾ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಸಬೀಲ್ ಖತೀಬರಾದ ಮುಹಮ್ಮದ್ ರಫೀಕ್, ಜ್ಯೋತಿ ನಗರ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದಲ್ ಲಾಡಿ ಮಸ್ಜಿದುನ್ನೂರ್ ಜುಮಾ ಮಸೀದಿಯ ಖತೀಬರಾದ ಅಕ್ರಂ ಅಲಿ ತಂಜ್ಞಲ್ ದ.ಕ ಜಿಲ್ಲಾ ವಕ್ಲ್ ಬೋಡ್೯ ಉಪಾಧ್ಯಕ್ಷರಾದ ಫರೇರಬ್ಬ ಮೊಸ್ಟರ್ ಸೇರಿದಂತೆ ಸಾವಿರ ಜಮಾತಿನ ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝಿಝ್ ಮಾರಿಕ್ ವಂದಿಸಿದರು.
0 Comments