ಅಂತರಾಷ್ಟ್ರೀಯ ವಿಕಲಚೇತನರ ದಿನಾಚರಣೆ


ಜಾಹೀರಾತು/Advertisment
ಜಾಹೀರಾತು/Advertisment

 ಅಂತರಾಷ್ಟ್ರೀಯ ವಿಕಲಚೇತನರ ದಿನಾಚರಣೆ

*ವಿಶೇಷಚೇತನರು ಸಮಾಜದ ಒಂದು ಭಾಗ: ಸಂದೇಶ್ ಪಿ.ಜಿ



ಮೂಡುಬಿದಿರೆ: ಸಾಮಾನ್ಯ ಮಕ್ಕಳಿಗಿರುವಂತೆ ವಿಶೇಷ ಚೇತನ ಮಕ್ಕಳಿಗೂ ಅವರದ್ದೇ ಆದ ಹಕ್ಕುಗಳಿವೆ. ಸಮಾಜದ ಒಂದು ಭಾಗವಾಗಿರುವ ಅವರ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಿ ಕಾನೂನಿಗೆ ಪೂರಕವಾದ  ಸೌಲಭ್ಯಗಳು ಅವರಿಗೆ ಸಿಗುವಂತ್ತಾಗಬೇಕು ಎಂದು ಮೂಡುಬಿದಿರೆ  ಪೊಲೀಸ್ ನಿರೀಕ್ಷಕ ಸಂದೇಶ್ ಪಿಜಿ ಹೇಳಿದರು.


  ಅವರು ಅಂತರಾಷ್ಟ್ರೀಯ ವಿಕಲಚೇತನರ ದಿನಾಚರಣೆಯ ಅಂಗವಾಗಿ ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ಮೂಡುಬಿದಿರೆ ಭಿನ್ನ ಸಾಮಥ್ಯ೯ವುಳ್ಳವರ ತರಬೇತಿ ಶಾಲೆಗಳು ಮತ್ತು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಸಮಾಜ ಮಂದಿರದಲ್ಲಿ ನಡೆದ ವಿಶೇಷ ಸಾಮಥ್ಯ೯ವುಳ್ಳ ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.


 ವಿಶೇಷ ಮಕ್ಕಳಲ್ಲಿ ವಿಶೇಷವಾದ ಶಕ್ತಿಯಿದೆ. ಅವರಿಗೂ ಸ್ವಾಭಿಮಾನದಿಂದ ಬದುಕಲು ಸ್ವ ಉದ್ಯೋಗದಂತಹ ಅವಕಾಶವನ್ನು ಕಲ್ಪಿಸಿ ಸಾಮಾನ್ಯರಂತೆ ಬೆಳೆಯಲು ಸಹಕಾರ ನೀಡಬೇಕೆಂದ ಅವರು  ಮಕ್ಕಳ ಪ್ರತಿಭೆಯನ್ನು  ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳು ಪೂರಕ ಎಂದರು.


 ಪುರಸಭಾ ಮುಖ್ಯಾಧಿಕಾರಿ ಇಂದು ಎಂ.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿಶೇಷ ಮಕ್ಕಳಲ್ಲಿರುವ ಪ್ರತಿಭೆಯನ್ನು ಅರ್ಥಮಾಡಿಕೊಂಡು ತರಬೇತಿಯನ್ನು ನೀಡಿದರೆ ಉತ್ತಮ ಎಂದರು. 

 ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅರ್ಜುನ್ ಭಂಡಾರ್ಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಶೇಷ ಮಕ್ಕಳು ಈಗ ಮಕ್ಕಳಾಗಿ ಉಳಿದಿಲ್ಲ ಅವರಿಗೂ ವಯಸ್ಸಾಗುತ್ತಿದೆ ಆದ್ದರಿಂದ ಶಾಲೆಯಲ್ಲಿ ಶಿಕ್ಷಕರಿಗೆ ಮತ್ತು ಮನೆಯಲ್ಲಿ ಹೆತ್ತವರಿಗೆ ಅವರನ್ನು ಬೆಳೆಸುವಲ್ಲಿ ಹೆಚ್ಚಿನ ಜವಾಬ್ದಾರಿಯಿದೆ ಎಂದರು.


  ಕ್ಷೇತ್ರ ಸಮನ್ವಯಾಧಿಕಾರಿ ಸೌಮ್ಯ, ಆದರ್ಶ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ.ಶೆರ್ಲಿ ಟಿ.ಬಾಬು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಆದರ್ಶ ಸಂಸ್ಥೆಯ ನಿರ್ದೇಶಕರಾದ ಜೇಕಬ್ ವರ್ಗೀಸ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಾರ್ಯಕರ್ತೆ ಜಯಶ್ರೀ ವಂದಿಸಿದರು.


   ಸಭಾ ಕಾರ್ಯಕ್ರಮದ ಮೊದಲು ಭಿನ್ನ ಸಾಮಥ್ಯ೯ವುಳ್ಳ ಮಕ್ಕಳು, ಪೋಷಕರು, ವಿಶೇಷ ಶಿಕ್ಷಕರು ಮತ್ತು ಹಿತೈಷಿಗಳಿಂದ ಮೂಡುಬಿದಿರೆ ಲೇಬರ್ ಶಾಲೆಯಿಂದ ಸಮಾಜ ಮಂದಿರದವರೆಗೆ ಜಾಗೃತಿ ಜಾಥಾ ನಡೆಯಿತು.

 ಮಧ್ಯಾಹ್ನದ ನಂತರ ವಿಶೇಷ ಮಕ್ಕಳು ಮತ್ತು ಪೋಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳು ನಡೆದವು.

  ಮೂಡುಬಿದಿರೆ ವಲಯದ ಸಮನ್ವಯ ಶಿಕ್ಷಣ ಕೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಹಿತ ಸ್ಪೂರ್ತಿ ಸಾಮಥ್ಯ೯ವುಳ್ಳ  ಮಕ್ಕಳ ವಿಶೇಷ ಶಾಲೆ, ಕಾರ್ಕಳದ ಅರುಣೋದಯ ವಿಶೇಷ ಶಾಲೆ, ಚೇತನ ವಿಶೇಷ ಶಾಲೆ, ವಿಜೇತ ವಿಶೇಷ ವಸತಿ ಶಾಲೆ, ಕ್ರಿಸ್ತರಾಜ ನವಚೇತನ ವಿಶೇಷ ಶಾಲೆ ವೇಣೂರು, ಕಿನ್ನಿಗೋಳಿಯ ಸೈಂಟ್ ಮೇರಿಸ್ ವಿಶೇಷ ಶಾಲೆ, ವಿಶೇಷ ಮಕ್ಕಳ ಪೋಷಕರ ವೇದಿಕೆಯ ಸಂಯೋಜನೆಯೊಂದಿಗೆ ಕಾರ್ಯಕ್ರಮ ನಡೆಯಿತು.

Post a Comment

0 Comments