21ನೇ ವರ್ಷದ ಮೂಡುಬಿದಿರೆ "ಕೋಟಿ - ಚೆನ್ನಯ" ಜೋಡುಕರೆ ಕಂಬಳ ಕೂಟದ ಫಲಿತಾoಶ
*ದಾಖಲೆಯ 278 ಜತೆ ಕೋಣಗಳು ಭಾಗಿ
ಮೂಡುಬಿದಿರೆ : ಇಲ್ಲಿನ ಒಂಟಿಕಟ್ಟೆ ಕಡಲಕೆರೆಯ ಅಬ್ಬಕ್ಕರಾಣಿ ಸಂಸ್ಕೃತಿ ಗ್ರಾಮದ ನಡೆದ ಇಪ್ಪತ್ತೊಂದನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ದಾಖಲೆಯ 278 ಜೋಡಿ ಕೋಣಗಳು ಭಾಗವಹಿಸುವ ಮೂಲಕ ಯಶಸ್ವಿಯಾಗಿ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ನಡೆದ ಭಾನುವಾರ ಬೆಳಿಗ್ಗೆ ಆರಂಭಗೊಂಡು ಸೋಮವಾರ ಮಧ್ಯರಾತ್ರಿ ವರೆಗೆ ನಡೆದ ಕಂಬಳಕೂಟದಲ್ಲಿ ಕನೆ ಹಲಗೆ ವಿಭಾಗದಲ್ಲಿ 7- ಜತೆ, ಅಡ್ಡ ಹಲಗೆ-5 ಜತೆ, ಹಗ್ಗ ಹಿರಿಯ ವಿಭಾಗದಲ್ಲಿ 21 ಜತೆ, ನೇಗಿಲು ಹಿರಿಯ 40 ಜತೆ, ಹಗ್ಗ ಕಿರಿಯ 38 ಜತೆ ಹಾಗೂ ನೇಗಿಲು ಕಿರಿಯ ವಿಭಾಗದಲ್ಲಿ 167 ಜತೆ ಹೀಗೆ ಒಟ್ಟು 278 ಕೋಣಗಳು ಭಾಗವಹಿಸಿ ಮೂಡುಬಿದಿರೆ ಕಂಬಳವು ದಾಖಲೆ ನಿರ್ಮಿಸಿತು.
ಫಲಿತಾಂಶ :
ಕನೆಹಲಗೆ ವಿಭಾಗ : ಬೋಳಾರ ತ್ರಿಶಾಲ್ ಕೆ ಪೂಜಾರಿ ಅವರ ಕೋಣಗಳು ( 6.5 ಕೋಲು ನಿಶಾನೆಗೆ ನೀರು ಹಾಯಿಸಿವೆ )
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
ಕಾಂತಾವರ ಬೇಲಾಡಿ ಬಾವ ಹವ್ಯನ್ ಪ್ರಜೋತ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ.
ಅಡ್ಡ ಹಲಗೆ ವಿಭಾಗದಲ್ಲಿ:
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
ದ್ವಿತೀಯ: ಕಾಂತಾವರ ಬೇಲಾಡಿ ಬಾವ ಹವ್ಯನ್ ಪ್ರಜೋತ್ ಶೆಟ್ಟಿ
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್.
ಹಗ್ಗ ಹಿರಿಯ ವಿಭಾಗ:
ಪ್ರಥಮ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ "ಬಿ"
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
ದ್ವಿತೀಯ: ಹರೇಕಳ ಕೈಡೇಲುಗುತ್ತು ಮಿಥುನ್ ಎಮ್ ರೈ "ಬಿ"
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ಹಗ್ಗ ಕಿರಿಯ:
ಪ್ರಥಮ: ಮೂಡುಬಿದಿರೆ ಹೊಸಬೆಟ್ಟು ಏರಿಮಾರು ಬರ್ಕೆ ಚೇತನ್ ಚಂದ್ರಹಾಸ ಸಾಧು ಸನಿಲ್
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಭಟ್ಕಳ ಎಚ್.ಎನ್. ನಿವಾಸ ಪಿನ್ನುಪಾಲ್
ಓಡಿಸಿದವರು: ಭಟ್ಕಳ ಶಂಕರ
ನೇಗಿಲು ಹಿರಿಯ:
ಪ್ರಥಮ: ರೆಂಜಾಳ ಕುದ್ರಾಡಿ ಶಿವಕೃಪ ವಿದ್ಯಾನಂದ ಹೆಗ್ಡೆ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ಬೋಳದಗುತ್ತು ಸತೀಶ್ ಶೆಟ್ಟಿ "ಬಿ"
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ.
ನೇಗಿಲು ಕಿರಿಯ:
ಪ್ರಥಮ: ತೋಡಾರು ಪಂಚಶಕ್ತಿ ಬಾರ್ದಿಲ ಶ್ಲೋಕ್ ರಂಜಿತ್ ಪೂಜಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ನಾವುಂದ ಆಶ್ರಿತ ಐಶಾನಿ ವಿಶ್ವನಾಥ ಪೂಜಾರಿ "ಎ"
ಓಡಿಸಿದವರು: ಪಟ್ಟೆ ಗುರುಚರಣ್.
ಕಳೆದ ಬಾರಿ 258 ಕೋಣಗಳು ಭಾಗವಹಿಸಿದ್ದು ಈ ಬಾರಿ 20 ಕೋಣಗಳು ಹೆಚ್ಚಾಗಿದೆ.
ಮುಂಜಾನೆ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಎ.ಉಮಾನಾಥ ಕೋಟ್ಯಾನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್, ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಮೂಡುಬಿದಿರೆ ಕಂಬಳ ಪ್ರಧಾನ ಕಾರ್ಯದರ್ಶಿ ಕೆ. ಗುಣಪಾಲ ಕಡಂಬ, ಕಾರ್ಯದರ್ಶಿ ರಂಜಿತ್ ಪೂಜಾರಿ, ಉಪಾಧ್ಯಕ್ಷ ಸುರೇಶ್ ಕೆ. ಪೂಜಾರಿ, ನಾಗರಾಜ ಪೂಜಾರಿ ಕಂಬಳ ಕೋಣಗಳ ಯಜಮಾನರುಗಳು ಈ ಸಂದರ್ಭದಲ್ಲಿದ್ದರು.
ಈ ಬಾರಿಯ ಆಕರ್ಷಣೀಯ ಸ್ವಾಗತ ಗೋಪುರಕ್ಕೆ ದೇಶದ ಗಡಿಯಲ್ಲಿ ಉಗ್ರರ ಧಾಳಿಗೆ ಪ್ರಾಣತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ. ವಿ. ಪ್ರಾಂಜಲ್ ನಾಮಕರಣಗೊಳಿಸಿದ್ದು ವಿಶೇಷವಾಗಿತ್ತು.
ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ , ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಶೆಟ್ಟಿಗಾರ್ ಕೇಶವ ಕರ್ಕೇರಾ, ತೀರ್ಪುಗಾರರಾದ ವಿಜಯಕುಮಾರ್ ಕಂಗಿನಮನೆ,ಬೋಳ ವಿಶ್ವನಾಥ ಕಾಮತ್ ಉಪಸ್ಥಿತರಿದ್ದರು.
0 Comments