ಬ್ರೇಕಿಂಗ್:ಧರ್ಮಸ್ಥಳದಲ್ಲಿ ಗಿರೀಶ್ ಮಟ್ಟಣ್ಣರಿಗೆ ದಿಗ್ಬಂಧನ ಹಾಕಿದ ಗ್ರಾಮಸ್ಥರು:ಪ್ರಮಾಣಕ್ಕೆ ಬನ್ನಿಯೆಂದ ನಾಗರಿಕರು
ಧರ್ಮಸ್ಥಳದ ಪಾಂಗಳ ನಿವಾಸಿ ಕುಮಾರಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಪರ ಹೋರಾಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಬಣದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣರವರಿಗೆ ನಾಗರೀಕರು ದಿಗ್ಭಂಧನ ಹಾಕಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಆರೋಪ ಮಾಡಿದ್ದ ಗಿರೀಶ್ ಮಟ್ಟಣ್ಣ ಧರ್ಮಸ್ಥಳ ಗ್ರಾಮಸ್ಥರು ಹಾಗೂ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಅವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಪೊಲೀಸ್ ಠಾಣೆಗೆ ಆಗಮಿಸಿದ ಗಿರೀಶ್ ಮಟ್ಟಣ್ಣರವರಿಗೆ ಗ್ರಾಮಸ್ಥರು ಸುತ್ತುವರಿದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ಆಗಿರುವ ಮಹಿಳೆಯರನ್ನು ಅತ್ಯಾಚಾರ ಮಾಡಲಾಗುತ್ತಿತ್ತು ಎಂಬ ಹೇಳಿಕೆಗೆ ಸ್ಪಷ್ಟನೆ ಕೇಳಿ ಆಗ್ರಹಿಸಿದರು. ಈ ಬಗ್ಗೆ ಪ್ರಮಾಣಕ್ಕೂ ಕರೆಯಲಾಯಿತು. ಅಷ್ಟೊತ್ತಿಗೆ ಕುಳಿತು ಮಾತನಾಡುವ ಎಂದು ಹೇಳಿ ಅದಾಗಲೇ ಬಂದ ಪೊಲೀಸ್ ಅಧಿಕಾರಿಗಳ ಜೊತೆಗೆ ತೆರಳಿದರು.
0 Comments