ಬಡ ಕುಟುಂಬದ ಯುವಕನ ಚಿಕಿತ್ಸೆಗೆ ಮಿಡಿದ ಯುವ ಹೃದಯಗಳು
ಮರೋಡಿ ಗ್ರಾಮದ ವಿಘ್ನೇಶ್ ಎಂಬ ಯುವಕನಿಗೆ ವಿಚಿತ್ರ ಖಾಯಿಲೆ
ಗಂಟಲು ಶಸ್ತ್ರ ಚಿಕಿತ್ಸೆಗೆ ಬೇಕಾಗಿದೆ 8 ಲಕ್ಷ ಹಣ
ನವಚೇತನ ಸೇವಾ ಬಳಗದಿಂದ ಮೂಡುಬಿದಿರೆಯಲ್ಲಿ ನಿಧಿ ಸಂಗ್ರಹ
ಬೆಳ್ತಂಗಡಿ ಹಾಗೂ ಮೂಡುಬಿದಿರೆ ತಾಲೂಕಿನ ಗಡಿ ಭಾಗದಲ್ಲಿರುವ ಮರೋಡಿ ಗ್ರಾಮದ ಬಡ ಕುಟುಂಬದ ವಿಘ್ನೇಶ್ ಎಂಬಾತ ವಿಚಿತ್ರ ಗಂಟಲು ಸೋಂಕಿನಿಂದ ಬಳಲುತ್ತಿದ್ದು ಈತನ ಚಿಕಿತ್ಸೆಗೆ 8 ಲಕ್ಷ ರೂಪಾಯಿಗಳ ಅಗತ್ಯತೆ ಇದ್ದು ಇಂದು ಮೂಡುಬಿದಿರೆಯ ಪ್ರತಿಷ್ಠಿತ ಸೇವಾ ತಂಡ ನವಚೇತನ ಸೇವಾ ಬಳಗ ರಿಜಿಸ್ಟರ್ ತೋಡಾರು ಇದರ ವತಿಯಿಂದ ಮೂಡುಬಿದಿರೆ ಪೇಟೆಯಲ್ಲಿ ಧನ ಸಂಗ್ರಹ ಕಾರ್ಯ ನಡೆಯಿತು. ವಿಭಿನ್ನ ವೇಷ ಧರಿಸಿ ಧನ ಸಂಗ್ರಹ ಮಾಡಿದ್ದು ಹತ್ತಾರು ಯುವಕರು ಇದರಲ್ಲಿ ಪಾಲ್ಗೊಂಡು ಯುವಕನ ಚಿಕಿತ್ಸೆಗೆ ನೆರವಾದರು. ತಮ್ಮ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಇದರ ಸಂಪೂರ್ಣ ಹಣವನ್ನು ಯುವಕನ ಕುಟುಂಬಕ್ಕೆ ನೀಡಲಿದ್ದೇವೆ. ಉತ್ತಮ ರೀತಿಯಲ್ಲಿ ಸ್ಪಂದಿಸಿದ ಮೂಡುಬಿದಿರೆಯ ನಾಗರಿಕರಿಗೆ ಧನ್ಯವಾದಗಳು ಎಂದು ನವಚೇತನ ಸೇವಾ ಬಳಗದ ಪ್ರಮುಖರು ತಿಳಿಸಿದರು.
0 Comments