ಪಿಡಿಒ ಸಾಯೀಶ ಚೌಟ ಅವರಿಗೆ ಹೆಚ್ಚುವರಿ ತಾ.ಪಂ.ಸಹಾಯಕ ನಿರ್ದೇಶಕ ಹುದ್ದೆ
ಮೂಡುಬಿದಿರೆ: ಗುರುವಾರ ಪಡುಮಾರ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಸಾಯೀಶ ಚೌಟ ಅವರಿಗೆ ಮೂಡುಬಿದಿರೆ ತಾಲೂಕು ಪಂಚಾಯತ್ ನ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಮುಂದಿನ ಆದೇಶದವರೆಗೆ ಖಾಲಿ ಇರುವ ತಾ.ಪಂ.ಆಡಳಿತ ನಿರ್ದೇಶಕ ಹುದ್ದೆಯ ಜವಾಬ್ದಾರಿಯನ್ನು ಆಡಳಿತಾತ್ಮಕ ದೃಷ್ಟಿಯಿಂದ ಸಾಯೀಶ ಚೌಟರಿಗೆ ನೀಡಿ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಆದೇಶಿಸಿದ್ದಾರೆ.
0 Comments