ಮೂಡುಬಿದಿರೆ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿ




ಮೂಡುಬಿದಿರೆ: ಪ್ರತಿಭಾ ಕಾರಂಜಿಯು ಮಕ್ಕಳಲ್ಲಿ ಅಂತಸ್ಥವಾಗಿರುವ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದ್ದು , ಮಕ್ಕಳು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಲ್ಲಿ ಮಕ್ಕಳ ಪ್ರತಿಭೆ ಹೊರಹೊಮ್ಮುದರಲ್ಲಿ ಸಂಶಯವಿಲ್ಲ ಎಂದು ಸೈಂಟ್ ಇಗ್ಲೇಷಿಯಸ್ ಆಂಗ್ಲ ಮಾಧ್ಯಮ ಶಾಲೆ ಪಾಲಡ್ಕ ಇಲ್ಲಿನ ಸಂಚಾಲಕ ಫಾ/ ಇಲಿಯಾಸ್ ಡಿ' ಸೋಜಾ ಹೇಳಿದರು.


  ಸೈಂಟ್ ಇಗ್ನೇಷಿಯಸ್ ಆಂಗ್ಲ ಮಾಧ್ಯಮ‌ ಶಾಲೆ ಪಾಲಡ್ಕ ಇಲ್ಲಿ ನಡೆದ ಮೂಡುಬಿದಿರೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.


ಪಾಲಡ್ಕ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಅಮಿತಾ ನಾಯ್ಕ್ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.


ಕೆ.ಎಂ.ಎಫ್ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ , ಪಾಲಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರವೀಣ್ ಸಿಕ್ವೇರಾ , ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರೂಪಾಕ್ಷಪ್ಪ ಹೆಚ್ ಎಸ್ , ಕ್ಷೇತ್ರ ಸಮನ್ವಯಾಧಿಕಾರಿಗಳಾಗಿರುವ ಸೌಮ್ಯಾ ಎನ್  , ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾಗಿರುವ ನಿತ್ಯಾನಂದ ಶೆಟ್ಟಿ , ಸಿ.ಆರ್.ಪಿ ಗಳಾಗಿರುವ ಮಹೇಶ್ವರಿ , ಆದರ್ಶ , ದಿನಕರ ಎಂ , ನಾಗರತ್ನ , ಬಿ.ಐ.ಇ.ಆರ್ ಟಿ ಗಳಾಗಿರುವ ಫ್ಲೇವಿ ಡಿ' ಸೋಜಾ , ವಿವಿಧ ಶಿಕ್ಷಕರ ಸಂಘಟನೆಗಳ ಅಧ್ಯಕ್ಷರಾಗಿರುವ ಡಾ.ರಾಜಶ್ರೀ ಬಿ , ಡಾ.ರಾಮಕೃಷ್ಣ ಶಿರೂರು , ನಾಗೇಶ್ ಎಸ್ , ಶಶಿಕಾಂತ್ ವೈ , ಜಾನ್ ರೊನಾಲ್ಡ್ ಡಿ" ಸೋಜಾ , ಸೀಮಾ ನಾಯಕ್ , ಸೈಂಟ್ ಇಗ್ನೇಷಿಯಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಿಕ್ಟೋರಿಯಾ ಲೋಬೋ , ಚರ್ಚ್ ನ ವಿವಿಧ ಸಂಘಟನೆಗಳ ಪದಾಧಿಕಾರಿಗಳಾಗಿರುವ  ಅವಿಲ್ ಡಿ'ಸೋಜಾ , ಅನ್ಸಿಲ್ಲಾ ಕಾರ್ಡೋಜಾ , ಡೆನಿಸ್ ಡಿ' ಮೆಲ್ಲೊ, ಆರ್ಥರ್ ಡಯಾಸ್ , ವಿದ್ಯಾ ಮಸ್ಕರೇನಸ್  ಉಪಸ್ಥಿತರಿದ್ದರು.


ತಾಲೂಕು ಪ್ರತಿಭಾ ಕಾರಂಜಿ ನೋಡಲ್ ರಾಜೇಶ್ ಭಟ್ ಸ್ವಾಗತಿಸಿ ಪ್ರಸ್ತಾವನೆ ಗೈದರು.  ಜೈನ್ ಪ್ರೌಢಶಾಲೆಯ ಶಿಕ್ಷಕ ನಿತೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಶಾಲೆಯ ಮುಖ್ಯ ಶಿಕ್ಷಕಿ ಜೆಸಿಂತಾ ಸಿಕ್ವೇರಾ ವಂದಿಸಿದರು.

Post a Comment

0 Comments