ಮೂಡುಬದಿರೆ ಕಂಬಳ ಸಮಾಲೋಚನಾ ಸಭೆ "ವೈಭವ" ದ ಕಂಬಳಕ್ಕೆ ಸಹಕಾರ ಕೋರಿದ ಶಾಸಕ ಕೋಟ್ಯಾನ್

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬದಿರೆ ಕಂಬಳ ಸಮಾಲೋಚನಾ ಸಭೆ

 "ವೈಭವ" ದ ಕಂಬಳಕ್ಕೆ ಸಹಕಾರ ಕೋರಿದ ಶಾಸಕ ಕೋಟ್ಯಾನ್ 


 

ಮೂಡುಬಿದಿರೆ : ಕೋಟಿ ಚೆನ್ನಯ ಜೊಡುಕರೆ ಕಂಬಳ ಸಮಿತಿಯ ವತಿಯಿಂದ ಡಿ. 17 ಮತ್ತು 18 ರಂದು ನಡೆಯುವ ಮೂಡುಬಿದಿರೆ ಕಂಬಳದ ಕುರಿತು ಸಮಾಲೋಚನಾ ಸಭೆಯು ಶುಕ್ರವಾರ ಸೃಷ್ಠಿ ಗಾರ್ಡನ್‌ನಲ್ಲಿ ನಡೆಯಿತು.


 ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಕೋಣಗಳು ಭಾಗವಹಿಸುವ ಕಂಬಳ ಇದಾಗಿದ್ದು ಶಿಸ್ತು ಅಚ್ಚುಕಟ್ಟು ಮತ್ತು ಸಮಯ ಪರಿಪಾಲನೆಗೆ ಹೆಸರಾಗಿದೆ. ಈ ಗೌರವವನ್ನು ಮುಂದಿನ ಕಂಬಳಗಳಲ್ಲಿಯೂ ಉಳಿಸಿಕೊಳ್ಳಬೇಕು. ಹಿಂದಿನ ಕಂಬಳದ ಸಮಯದಲ್ಲಿ ತಾವು ಯಾರ ಬಳಿಯೂ ಧನದ ಸಹಕಾರವನ್ನು ಕೇಳಿಲ್ಲ ಈ ಬಾರಿ ಕಂಬಳವು ವೈಭವಯುತವಾಗಿ ನಡೆಯಲು ಎಲ್ಲರೂ ಸಹಕಾರ ನೀಡುವಂತೆ ಕೇಳಿದರು.


 ಕ್ರೀಡಾಂಗಣದ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರದ ಅನುದಾನದಿಂದ 50 ಲಕ್ಷ ರೂ ವೆಚ್ಚದಲ್ಲಿ ಆವರಣ ಗೋಡೆ ನಿರ್ಮಿಸಲಾಗುವುದು. ಕಡಲಕೆರೆಯ ಅಭಿವೃದ್ಧಿಗಾಗಿ 10 ಕೋಟಿ ಯೋಜನೆ ರೂಪಿಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.  ಅಲ್ಲದೆ ಸುಸಜ್ಜಿತ ಫುಡ್‌ಕೋರ್ಟ್ ನಿರ್ಮಿಸುವ ಯೋಜನೆಯೂ ಇದೆ. ಈ ಬಾರಿ ಪಿಲಿಕುಳ ನಿಸರ್ಗಧಾಮದಲ್ಲಿ ಕಂಬಳ ನಡೆಸಬೇಕೆಂಬ ಯೋಜನೆಯಿತ್ತು ಆದರೆ ಕಾರಣಾಂತರದಿಂದ ನಡೆಯುತ್ತಿಲ್ಲ ಮುಂದಿನ ಬಾರಿ ನಡೆಸಲಾಗುವುದು ಎಂದರು.

ಕಂಬಳ ಸಮಿತಿಯ ಪ್ರಧಾನ ಕರ‍್ಯದರ್ಶಿ ಗುಣಪಾಲ ಕಡಂಬ ಮಾತನಾಡಿ ಕಂಬಳ ಕ್ರೀಡಾಂಗಣಕ್ಕೆ ಹಿಂದೆ ಸರ್ಕಾರ 10 ಎಕ್ರೆ ಸ್ಥಳ ಮಂಜೂರುಗೊಳಿಸಿತ್ತು. ಆದರೆ ಭಾಗಶಃ ಸ್ಥಳ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು ಅದನ್ನು ಕಂಬಳಕ್ಕೆ ಬಿಟ್ಟುಕೊಡಬೇಕು. ಆ ಸ್ಥಳದಲ್ಲಿ ಕಂಬಳ ಲೋಕ ಮ್ಯೂಸಿಯಂ ನಿರ್ಮಿಸಲಾಗುವುದು ಎಂದರು.

ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್  ಮಾತನಾಡಿ ಕಂಬಳದಲ್ಲಾಗುವ ಲೋಪದೋಷಗಳನ್ನು ಸರಿಪಡಿಸಲು ಎಲ್ಲರ ಸಹಕಾರ ಕೋರಿದರು. ಕೆಎಂಎಫ್ ಅಧ್ಯಕ್ಷ ಕೆಪಿ ಸುಚರಿತ ಶೆಟ್ಟಿ, ಕಂಬಳ ಸಮಿತಿಯ ಕಾರ್ಯದರ್ಶಿ ರಂಜಿತ್ ಪೂಜಾರಿ ಮಾತನಾಡಿದರು. 

ಬಿಜೆಪಿ ಮುಖಂಡರಾದ ಕೆ.ಪಿ ಜಗದೀಶ ಅಧಿಕಾರಿ, ಸುನಿಲ್ ಆಳ್ವ, ಈಶ್ವರ ಕಟೀಲು, ನಾಗರಾಜ ಪೂಜಾರಿ, ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ, ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಜಿಲ್ಲಾ ಕಂಬಳ ಸಮಿತಿಯ ತೀರ್ಪುಗಾರ ವಿಜಯಕುಮಾರ್ ಕಂಗಿನಮನೆ ಮತ್ತಿತರರು ಉಪಸ್ಥಿತರಿದ್ದರು. ನ್ಯಾಯವಾದಿ ಸುರೇಶ್ ಕೆ. ಪೂಜಾರಿ ಕಾಯಕ್ರಮ ನಿರ್ವಹಿಸಿದರು

Post a Comment

0 Comments