ಕಟೀಲು ಬಳಿ ಲಾರಿ ಪಲ್ಟಿ: ಪಾಲಡ್ಕದ ನಿವಾಸಿ, ಚಾಲಕ ಸಾವು

ಜಾಹೀರಾತು/Advertisment
ಜಾಹೀರಾತು/Advertisment

 ಕಟೀಲು ಬಳಿ ಲಾರಿ ಪಲ್ಟಿ: ಪಾಲಡ್ಕದ ನಿವಾಸಿ, ಚಾಲಕ ಸಾವು


ಮೂಡುಬಿದಿರೆ: ನಿಡ್ಡೋಡಿಯಿಂದ ಕಟೀಲು ಕಡೆಗೆ ಕಲ್ಲು ಹೇರಿಕೊಂಡು ಹೋಗುತ್ತಿದ್ದ ಟಿಪ್ಪರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಪರಿಣಾಮವಾಗಿ ಟಿಪ್ಪರ್ ಚಾಲಕ, ಮೂಡುಬಿದಿರೆ ತಾಲೂಕು ಪಾಲಡ್ಕದ ನಿವಾಸಿ ವಿಶ್ವನಾಥ ನಾಯಕ್ ಮೃತಪಟ್ಟಿದ್ದಾರೆ.


  ಶುಂಠಿಲ ಪದವು ಕಡೆಯಿಂದ ಕೆಂಪುಕಲ್ಲು ಹೇರಿಕೊಂಡು ಕಟೀಲು ಕಡೆಗೆ ಬರುತ್ತಿದ್ದಾಗ ಸೌಂದರ್ಯ ರೆಸಾಟ್‌೯ ಚಡಾವು ಬಳಿ ದೊಡ್ಡ ಹೊಂಡಕ್ಕೆ ಟಿಪ್ಪರ್  ಬಿದ್ದಿದೆ ಈ ಸಂದರ್ಭ ಚಾಲಕ ವಿಶ್ವನಾಥ  ಟಿಪ್ಪರ್ ನ ಒಳಗಡೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


 

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

------------

ಬಡಕುಟುಂಬದವರಾಗಿರುವ ವಿಶ್ವನಾಥ ನಾಯಕ್‌ ಅವರ ಕುಟುಂಬದ ಜೀವನವು ಅವರ ದುಡಿಮೆಯಿಂದಲೇ  ನಡೆಯುತ್ತಿತ್ತು.  ಪತ್ನಿ ಮತ್ತು ಪುಟ್ಟ ಪುಟ್ಟ ಇಬ್ಬರು ಹೆಣ್ಣು ಮಕ್ಕಳಿದ್ದು ಇವರ ಮುಂದಿನ ಜೀವನಕ್ಕೆ ಕಷ್ಟ ಸಾಧ್ಯವಾಗಿದೆ.

Post a Comment

0 Comments